KARNATAKA
ಬಾತ್‌ರೂಂಗೆ ತೆರಳಿದ್ದ ಯುವತಿ ಹೃದಯಾಘಾತಕ್ಕೆ ಬಲಿ

ಹಾಸನ, ಮೇ 22 : ಬಾತ್‌ರೂಂಗೆ ತೆರಳಿದ್ದ ಯುವತಿ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಹೊಳೆನರಸೀಪುರ ಪಟ್ಟಣದಲ್ಲಿ ನಡೆದಿದೆ.
ಸಂಧ್ಯಾ (19) ಮೃತ ಯುವತಿ. ಹೊಳೆನರಸೀಪುರ ಪಟ್ಟಣದ ಮಡಿವಾಳ ಬಡಾವಣೆಯ ನಿವಾಸಿಗಳಾದ ವೆಂಕಟೇಶ್-ಪೂರ್ಣಿಮ ದಂಪತಿ ಪುತ್ರಿ ಸಂಧ್ಯಾ ಅಂತಿಮ ವರ್ಷದ ಡಿಪ್ಲೊಮಾ ಮುಗಿಸಿದ್ದಳು.

ಬಾತ್‌ರೂಂಗೆ ತೆರಳಿದ್ದ ವೇಳೆ ಸಂಧ್ಯಾ ಕುಸಿದು ಬಿದ್ದಿದ್ದಾಳೆ. ಕೂಡಲೇ ಬಾತ್‌ರೂಂ ಬಾಗಿಲು ಒಡೆದು ಪೋಷಕರು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದರು. ಆದರೆ ಅಷ್ಟು ಹೊತ್ತಿಗೆ ಸಂಧ್ಯಾಳ ಪ್ರಾಣ ಪಕ್ಷಿ ಹೋಗಿತ್ತು. ಸಂಧ್ಯಾ ಕೆಲ ವರ್ಷಗಳಿಂದ ಬಿಪಿ-ಶುಗರ್‌ನಿಂದ ಬಳಲುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ