KARNATAKA
ಮದ್ರಸಕ್ಕೆ ತೆರಳುತ್ತಿದ್ದ ಬಾಲಕಿಯನ್ನು ಎತ್ತಿ ಎಸೆದ ಯುವಕ : ಆರೋಪಿ ಬಂಧನ
ಮಂಜೇಶ್ವರ, ನವೆಂಬರ್ 18: ಕಾಸರಗೋಡಿನ ಮಂಜೇಶ್ವರ ದಲ್ಲಿ ಮದ್ರಸಕ್ಕೆ ತೆರಳುತ್ತಿದ್ದ ಬಾಲಕಿಯನ್ನು ಅಪರಿಚಿತ ಯುವಕನೋರ್ವ ಎತ್ತಿ ಎಸೆದ ಅಮಾನವೀಯ ಘಟನೆ ನಡೆದಿದೆ.
ಆರೋಪಿ ಮಂಜೇಶ್ವರ ಕುಂಜತ್ತೂರಿನ ಅಬೂಬಕ್ಕರ್ ಸಿದ್ದೀಕ್ (30) ಎಂದು ಗುರುತಿಸಲಾಗಿದ್ದು, ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಗುರುವಾರ ಬೆಳಗ್ಗೆ ಏಳು ಗಂಟೆಯ ಸುಮಾರಿಗೆ ಈ ಘಟನೆ ಸಂಭವಿಸಿದೆ. ಗಾಯಗೊಂಡಿರುವ 9 ರ ಹರೆಯದ ಬಾಲಕಿಯನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮದ್ರಸಕ್ಕೆ ನಡೆದುಕೊಂಡು ಹೋಗುತ್ತಿದ್ದ ಬಾಲಕಿಯ ಹತ್ತಿರ ಬಂದ ಈತ ಬಾಲಕಿಯನ್ನು ಮೇಲಕ್ಕೆತ್ತಿ ಎಸೆದಿದ್ದು, ಕೃತ್ಯದ ಬಳಿಕ ಆರೋಪಿ ಅಲ್ಲಿಂದ ಪರಾರಿಯಾಗಿದ್ದ. ಬಾಲಕಿಯ ಪೋಷಕರು ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಘಟನೆಯನ್ನು ರಾಜ್ಯ ಸರಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ತಿಳಿಸಿದ್ದಾರೆ.