LATEST NEWS
ಸುಮ್ಮನೆ ಕುಳಿತು 20 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದ ಯೂಟ್ಯೂಬರ್..!!

ಜಕಾರ್ತ: ಯೂಟ್ಯೂಬ್ ನಲ್ಲಿ ಲಕ್ಷಾಂತರ ವೀಕ್ಷಣೆ ಪಡೆಯಲು ಕಸರತ್ತು ಮಾಡುವ ಈ ಕಾಲದಲ್ಲಿ ಇಲ್ಲೊಬ್ಬ ಯೂಟ್ಯೂಬರ್ ಏನೂ ಮಾಡದೆ ಲಕ್ಷಾಂತರ ವೀವ್ಸ್ ಗಿಟ್ಟಿಸಿ ಅಚ್ಚರಿ ಮೂಡಿಸಿದ್ದಾನೆ. ಇತನ ಒಂದು ವಿಡಿಯೋವನ್ನು ಬರೋಬ್ಬರಿ 20 ಲಕ್ಷ ವೀಕ್ಷಿಸಿದ್ದಾರೆ.
ಇಂಡೋನೆಷ್ಯಾದ ಮುಹಮ್ಮದ್ ದಿದಿತ್ ಎಂಬ ಯೂಟ್ಯೂಬರ್ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ತಮ್ಮ ಮಾತೃ ಭಾಷೆಯಲ್ಲಿ ವಿಡಿಯೋ ಕುರಿತು ಬರೆದುಕೊಂಡಿದ್ದು ಅದರ ಸಾರ ಹೀಗಿದೆ… “ಏನೂ ಮಾಡದ ಎರಡು ಗಂಟೆ” ಎಂದು ಅಡಿಬರಹ ನೀಡಲಾಗಿದೆ.

ಈ ವಿಡಿಯೋದಲ್ಲಿರುವ ಯೂಟ್ಯೂಬರ್ 2 ಗಂಟೆ 20 ನಿಮಿಷ ಹಾಗೂ 52 ಸೆಕೆಂಡ್ ಏನೂ ಮಾಡದೇ ಸುಮ್ಮನೆ ನೆಲದ ಮೇಲೆ ಕುಳಿತು ಮಂಚಕ್ಕೆ ಒರಗಿದ್ದಾರೆ. ಕೇವಲ ಕ್ಯಾಮೆರಾವನ್ನು ಮಾತ್ರ ದಿಟ್ಟಿಸಿ ನೋಡಿದ್ದಾನೆ. ಈ ವಿಡಿಯೋದಲ್ಲಿ ಯೂಟ್ಯೂಬರ್ ಕೇವಲ ಕಣ್ಣು ಮಿಟುಕಿಸುವುದನ್ನು ಬಿಟ್ಟರೆ, ಬೇರೆ ಯಾವ ಚಟುವಟಿಕೆಯಾಗಲಿ, ಶಬ್ಧವಾಗಲಿ ವಿಡಿಯೋದಲ್ಲಿ ಇಲ್ಲ. ಆದರೂ ಈ ವಿಡಿಯೋವನ್ನು ಬರೋಬ್ಬರಿ 20 ಲಕ್ಷಕ್ಕೂ ಅಧಿಕ ಮಂದಿ ವಿಕ್ಷಿಸಿದ್ದಾರೆ.
ಈ ಬಗ್ಗೆ ಡಿಸ್ಕ್ರಿಪ್ಸನ್ ಬಾಕ್ಸ್ನಲ್ಲಿ ಬರೆದುಕೊಂಡಿರುವ ಯೂಟ್ಯೂಬರ್, ನಾನು ಈ ವಿಡಿಯೋ ಏಕೆ ಮಾಡಿದೆ ಎಂಬುದನ್ನು ನಾನು ಶೇರ್ ಮಾಡಿಕೊಳ್ಳುತ್ತೇನೆ. ಯುವಜನರಿಗೆ ಶಿಕ್ಷಣ ನೀಡುವ ವಿಷಯವನ್ನು ಪೋಸ್ಟ್ ಮಾಡಲು ಇಂಡೋನೇಷಿಯನ್ ಸೊಸೈಟಿ ಕೇಳಿಕೊಂಡಿತು. ಇಷ್ಟವಿಲ್ಲದೆ, ಭಾರವಾದ ಹೃದಯದಿಂದ ನಾನಿದನ್ನು ಮಾಡಿದೆ. ನಾವೀಗ ವಿಡಿಯೋದ ಲಾಭದ ಬಗ್ಗೆ ಮಾತನಾಡಬೇಕಾದರೆ, ಅದೆಲ್ಲಾ ವೀಕ್ಷಕರ ಮೇಲೆ ಅವಲಂಬಿತವಾಗಿರುತ್ತದೆ. ಏನೇ ಆಗಲಿ ಈ ವಿಡಿಯೋದಿಂದ ನೀವೆಲ್ಲರೂ ಮನರಂಜನೆ ಹಾಗೂ ಲಾಭವನ್ನು ಪಡೆಯುತ್ತೀರಾ ಎಂದು ನಾನು ಭಾವಿಸಿದ್ದೇನೆಂದು ಬರೆದುಕೊಂಡಿದ್ದಾರೆ.
ಜುಲೈ 10ರಂದು ಅಪ್ಲೋಡ್ ಆದ ವಿಡಿಯೋ ಇದೀಗ ವೈರಲ್ ಆಗಿದ್ದು, ಯೂಟ್ಯೂಬ್ನಲ್ಲಿ 20 ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿದೆ. ಈ ವ್ಯಕ್ತಿ ಏನು ಮಾಡದೇ ಎರಡು ಗಂಟೆ ಕಳೆದಿದ್ದಾರೆ ಎಂದು ಕಾಮೆಂಟ್ ಮಾಡಿದರೆ, ಮತ್ತೊರ್ವ ಇವರು 362 ಬಾರಿ ಕಣ್ಣು ಮಿಟುಕಿಸಿದ್ದಾರೆ ಎಂದಿದ್ದಾರೆ. ಏನೇ ಆದರೂ ಅಷ್ಟೋಂದು ವೀವ್ಸ್ ಬಂದಿರುವುದು ಅಚ್ಚರಿಯೇ ಸರಿ.