UDUPI
ಲಕ್ಷ್ಮೀನಗರ ಬೆಳ್ಕಳೆ ಯೋಗೇಶ್ ಹತ್ಯೆ ಪ್ರಕರಣ ಮೂವರು ಆರೋಪಿಗಳ ಬಂಧನ
ಉಡುಪಿ ಜುಲೈ 8: ಲಕ್ಷ್ಮೀನಗರ ಬೆಳ್ಕಳೆ ಯೋಗೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪ್ರಮುಖ ಆರೋಪಿಗಳನ್ನು ಒಂದೇ ದಿನದಲ್ಲಿ ಬಂಧಿಸುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕುಖ್ಯಾತ ರೌಡಿ ಶೀಟರ್ ಸುಜಿತ್ ಪಿಂಟೋ ಸಹಿತ ಮೂವರು ಆರೋಪಿಗಳ ಬಂಧಿಸಲಾಗಿದ್ದು, ಬಂಧಿತರನ್ನು ಸುಜಿತ್ ಸಹೋದರ ರೋಹಿತ್ ಪಿಂಟೋ ಅಣ್ಣು ಯಾನೆ ಪ್ರದೀಪ್, ವಿನಯ್ ಎಂದು ಗುರುತಿಸಲಾಗಿದೆ.
ರೌಡಿ ಶೀಟರ್ ಪಿಂಟೋ ಮತ್ತು ಆತನ ಐದಾರು ಸಹಚರರು ಕ್ಷುಲ್ಲಕ ವಿಷಯಕ್ಕಾಗಿ ಯೋಗೀಶ್ ಪೂಜಾರಿಯ ಜೊತೆ ಲಕ್ಷ್ಮೀನಗರದಲ್ಲಿ ಸೋಮವಾರ ತಡರಾತ್ರಿ ಗಲಾಟೆ ನಡೆದಿದೆ. ಈ ವೇಳೆ ದುಷ್ಕರ್ಮಿಗಳು ಯೋಗೀಶ್ ಪೂಜಾರಿಯನ್ನು ಚೂರಿಯಿಂದ ಇರಿದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯೋಗೀಶ್ ಪೂಜಾರಿಯನ್ನು ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ ಮಾರ್ಗ ಮಧ್ಯೆಯೇ ಯೋಗೀಶ್ ಮೃತಪಟ್ಟಿದ್ದಾನೆ.
ಕೂಡಲೇ ಪ್ರಕರಣದ ಬೆನ್ನತ್ತಿದ್ದ ಮಲ್ಪೆ ಪೊಲೀಸರು ಘಟನೆ ನಡೆದ ಒಂದು ದಿನದ ಒಳಗೆ ಪ್ರಕರಣದ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆ ನಡೆದ ಸ್ಥಳಕ್ಕೆ ಆರೋಪಿಗಳನ್ನು ಕರೆತಂದು ಮಹಜರು ನಡೆಸಿದ್ದಾರೆ.
Facebook Comments
You may like
ಸತ್ತು 8 ತಿಂಗಳುಗಳ ಬಳಿಕ ಮನೆಯೊಂದರಲ್ಲಿ ಅಸ್ಥಿಪಂಜರ ಪತ್ತೆ
ಉಡುಪಿ: ಚಾಲಕಿಯ ನಿಯಂತ್ರಣ ತಪ್ಪಿದ ಕಂದಕಕ್ಕೆ ಬಿದ್ದ ಕಾರು
17 ವರ್ಷದ ಮಗಳ ಅಕ್ರಮ ಸಂಬಂಧ …ಮಗಳ ರುಂಡ ಕತ್ತರಿಸಿ ಪೊಲೀಸ್ ಠಾಣೆಗೆ ಬಂದ ಅಪ್ಪ..!!
ಪುತ್ತೂರು ಮಹಿಳಾ ಎಸ್ ಐ ಮೇಲೆ ಹಲ್ಲೆ – ಸಹೋದರಿಯರ ಬಂಧನ
ಚಡ್ಡಿ ಕದ್ದು ಧರಿಸಿದ್ದಕ್ಕೆ ಸಹೋದ್ಯೋಗಿಯನ್ನು ಚಾಕುವಿನಿಂದ ಇರಿದು ಕೊಂದ!
ಯಾರಿಗೂ ವಂಚನೆ ಮಾಡಿಲ್ಲ – ಐ ವಿಲ್ ಕಮ್ ಬ್ಯಾಕ್ ಅಗೈನ್ – ಬಿ.ಆರ್ ಶೆಟ್ಟಿ
You must be logged in to post a comment Login