LATEST NEWS
ಯಡಕುಮೇರಿ ರೈಲ್ವೆ ಹಳಿ ಮೇಲೆ ಮತ್ತೆ ಗುಡ್ಡ ಕುಸಿತ

ಯಡಕುಮೇರಿ ರೈಲ್ವೆ ಹಳಿ ಮೇಲೆ ಮತ್ತೆ ಗುಡ್ಡ ಕುಸಿತ
ಮಂಗಳೂರು ಅಗಸ್ಟ್ 27: ಮಂಗಳೂರು ಬೆಂಗಳೂರು ರೈಲ್ವೆ ಮಾರ್ಗದಲ್ಲಿ ಮತ್ತೆ ಭೂ ಕುಸಿತ ಉಂಟಾಗಿದ್ದು, ರೈಲು ಸಂಚಾರ ಆರಂಭಕ್ಕೆ ರೈಲ್ವೆ ಇಲಾಖೆ ನಡೆಸುತ್ತಿರುವ ತೆರವು ಕಾರ್ಯಾಚರಣೆಗೆ ಮತ್ತೆ ತೊಡಕು ಉಂಟಾಗಿದೆ.
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಉಂಟಾದ ಭೂಕುಸಿತದಿಂದ ಸಂಪೂರ್ಣ ಬಂದ್ ಆಗಿದ್ದ ಮಂಗಳೂರು – ಬೆಂಗಳೂರು ರೈಲ್ವೆ ಮಾರ್ಗದ ಗುಡ್ಡ ಕುಸಿತದ ತೆರವು ಕಾರ್ಯಾಚರಣ ನಡೆಯುತ್ತಿದ್ದು, ರೈಲ್ವೆ ಇಲಾಖೆ ಶೀಘ್ರದಲ್ಲೆ ರೈಲು ಮಾರ್ಗ ತೆರವಿಗೆ ಪ್ರಯಯತ್ನಿಸುತ್ತಿದ್ದಾರೆ. ಆದರೆ ಈಗ ಮತ್ತೆ ಬೆಂಗಳೂರು ಮಂಗಳೂರು ರೈಲ್ವೇ ಹಳಿ ಮೇಲೆ ಮತ್ತೆ ಗುಡ್ಡ ಕುಸಿತವಾಗಿ ರೈಲು ಸಂಚಾರ ಬಂದ್ ಆಗಿದೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಡಕುಮರಿಯ 72ನೇ ಮೈಲಿ ಬಳಿ ಮತ್ತೆ ಗುಡ್ಡ ಕುಸಿತವಾಗಿದೆ. ಕಳೆದ ಕೆಲ ದಿನಗಳಿಂದ ಗುಡ್ಡ ಕುಸಿದು ರೈಲು ಸಂಚಾರ ಬಂದ್ ಆಗಿತ್ತು. ಇನ್ನೇನು ತೆರವು ಕಾರ್ಯ ಪೂರ್ಣವಾಗಿ ರೈಲು ಸಂಚಾರ ಮತ್ತೆ ಆರಂಭವಾಗುತ್ತದೆ ಎನ್ನುವಷ್ಟರಲ್ಲಿ ಮತ್ತೆ ಗುಡ್ಡ ಕುಸಿದಿರುವುದರಿಂದ ರೈಲು ಸಂಚಾರ ಬಂದ್ ಆಗಿದೆ.
ಯಡಕುಮರಿಯಲ್ಲಿ ಪದೇ ಪದೆ ಗುಡ್ಡ ಕುಸಿಯುತ್ತಿದ್ದು, ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ದೌಡಾಯಿಸಿದ್ದಾರೆ. ಸಕಲೇಶಪುರ ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ಹಾಸನ ಮೂಲಕ ಕರಾವಳಿಗೆ ಸಂಪರ್ಕ ಸಂಪೂರ್ಣ ನಿಂತಿದೆ. ಒಂದೆಡೆ ರೈಲು ಮಾರ್ಗ ಇನ್ನೊಂದೆಡೆ ಶಿರಾಡಿಘಾಟ್ ರಸ್ತೆ ಬಂದ್ ಹಿನ್ನೆಲೆ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ.