Connect with us

    LATEST NEWS

    ಕೇರಳದ ಸೈಬರ್ ಪೊಲೀಸರಿಗೆ ಕರೆ ಮಾಡಿದ ಸೈಬರ್ ವಂಚಕ..ಮುಂದೆನಾಯ್ತು…!!

    ಕೇರಳ ನವೆಂಬರ್ 15: ಮುಂಬೈ ಪೊಲೀಸ್ ಅಧಿಕಾರಿಗಳ ರೀತಿ ಕರೆ ಮಾಡಿ ಡಿಜಿಟಲ್ ಅರೆಸ್ಟ್ ಮಾಡುವ ಸೈಬರ್ ವಂಚಕರು ಇದೀಗ ಸೀದಾ ಕೇರಳದ ಸೈಬರ್ ಪೊಲೀಸರಿಗೆ ಕರೆ ಮಾಡಿ ಸಿಕ್ಕಿಹಾಕಿಕೊಂಡಿದ್ದಾರೆ.


    ಮುಂಬೈನ ಪೊಲೀಸ್ ಅಧಿಕಾರಿ ರೀತಿ ಡ್ರೆಸ್ ಹಾಕಿಕೊಂಡ ವಂಚಕ ತಾನು ಮುಂಬೈನ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ತ್ರಿಶೂರ್ ಸೈಬರ್ ಸೆಲ್ ಅಧಿಕಾರಿ ಕ್ಯಾಮೆರಾ ಆನ್ ಮಾಡಿದ ತಕ್ಷಣ, ವಂಚಕನಿಗೆ ತಾನು ನಿಜವಾಗಿಯೂ ಪೊಲೀಸರೊಂದಿಗೆ ಮಾತನಾಡುತ್ತಿದ್ದೇನೆ ಎಂದು ಮನವರಿಕೆಯಾಗಿದೆ.

    ಈ ಕುರಿತು ತ್ರಿಶೂರ್ ಸಿಟಿ ಪೊಲೀಸರು ಹಂಚಿಕೊಂಡಿರುವ ವೀಡಿಯೊ ವೈರಲ್ ಆಗಿದ್ದು, 162,000 ಮಂದಿ ವೀಕ್ಷಿಸಿದ್ದಾರೆ. 7,600 ಮಂದಿ ಲೈಕ್‌ ಮಾಡಿದ್ದಾರೆ. ನೈಜ ಪೋಲೀಸರ ಜೊತೆ ಮಾತನಾಡುತ್ತಿರುವುದನ್ನು ಕಂಡು ವಂಚಕನು ಒಮ್ಮೆಲೇ ತಬ್ಬಿಬ್ಬಾಗುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸೈಬರ್ ವಂಚನೆಯ ಅಪಾಯಗಳನ್ನು ವೀಕ್ಷಕರಿಗೆ ತಿಳಿಸಲು ತ್ರಿಶೂರ್ ಪೊಲೀಸರು ವೀಡಿಯೊವನ್ನು ಬಳಸಿದ್ದಾರೆ. ಯಾರಾದರೂ ಸೈಬರ್ ಅಪರಾಧಕ್ಕೆ ಬಲಿಯಾದವರು ತಕ್ಷಣ ಸಹಾಯವಾಣಿ ಸಂಖ್ಯೆ 1930 ಗೆ ಕರೆ ಮಾಡುವ ಮೂಲಕ ಅದನ್ನು ವರದಿ ಮಾಡುವಂತೆ ಅವರು ತಿಳಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *