LATEST NEWS
ಮೂವರು ಮುಸ್ಲಿಂ ವಿಧ್ಯಾರ್ಥಿನಿಯರಿಂದಾಗಿ ಇಡೀ ಉಡುಪಿ ಜಿಲ್ಲೆಯ ಜನರು ತಲೆ ತಗ್ಗಿಸುವಂತಾಗಿದೆ – ಯಶಪಾಲ್ ಸುವರ್ಣ
ಉಡುಪಿ ಜುಲೈ 25: ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ಮೊಬೈಲ್ ಕ್ಯಾಮರಾ ಇಟ್ಟು ವಿಡಿಯೋ ರೆಕಾರ್ಡ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥ ಮೂವರು ವಿಧ್ಯಾರ್ಥಿನಿಯರ ಮೇಲೆ ಪೊಲೀಸರು ಸುಮೊಟೊ ಕೇಸ್ ದಾಖಲಿಸಬೇಕೆಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಆ ಮೂವರು ಮುಸ್ಲಿಂ ವಿಧ್ಯಾರ್ಥಿನಿಯರಿಂದಾಗಿ ಇಡೀ ಉಡುಪಿ ಜಿಲ್ಲೆಯ ಜನರು ತಲೆತಗ್ಗಿಸುವಂತಾಗಿದೆ. ಯಾರು ಈ ರೀತಿಯ ಮಕ್ಕಳಾಟಿಕೆ ಮಾಡುವುದು ಸರಿಯಲ್ಲ. ಮೂವರು ಹುಡುಗಿಯರು ಶೌಚಾಲಯದಲ್ಲಿ ವಿಡಿಯೋ ಮಾಡುವುದು ಅಕ್ಷಮ್ಯ ಅಪರಾಧವಾಗಿದ್ದು, ಇದೇ ರೀತಿಯ ಪ್ರಕರಣಗಳು ದೇಶದ ಬೇರೆ ಕಡೆ ನಡೆದ ಪ್ರಕರಣಗಳು ಇದ್ದು, ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿರುವ ಸಾಧ್ಯತೆ ಇದೆ ಎಂದು ಯಶಪಾಲ್ ಸುವರ್ಣ ತಿಳಿಸಿದರು. ಈ ಹಿನ್ನಲೆ ಮುಖ್ಯಮಂತ್ರಿಗಳು ಕೂಡಲೇ ತಪ್ಪಿತಸ್ಥ ವಿಧ್ಯಾರ್ಥಿನಿಯರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.
You must be logged in to post a comment Login