Connect with us

    FILM

    ಕಿರಾಣಿ ಅಂಗಡಿಯಲ್ಲಿ ಹೆಂಡತಿಗೆ ಐಸ್ ಕ್ಯಾಂಡಿ ಕೊಡಿಸಿದ ಯಶ್

    ಭಟ್ಕಳ ಫೆಬ್ರವರಿ 17: ಕೆಜಿಎಫ್ ಸ್ಟಾರ್ ಯಶ್ ಅವರು ತಮ್ಮ ಹೆಂಡತಿ ನಟಿ ರಾಧಿಕಾ ಪಂಡಿತ್ ಅವರಿಗೆ ಸಣ್ಣ ಕಿರಾಣಿ ಅಂಗಡಿಯಲ್ಲಿ ಐಸ್ ಕ್ಯಾಂಡಿ ಕೊಡಿಸಿದ ಪೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


    ಭಟ್ಕಳದ ತಾಲ್ಲೂಕಿನ ಚಿತ್ರಾಪುರ ಮಠಕ್ಕೆ ಗುರುವಾರ ರಾತ್ರಿ ಆಗಮಿಸಿದ್ದ ಚಿತ್ರನಟ ಯಶ್ ಆಗಮಿಸಿದ್ದರು, ಸಿನಿಮಾ ಚಿತ್ರೀಕರಣದ ಒತ್ತಡದ ನಡುವೆಯೂ ವರ್ಷಕ್ಕೆ ಒಮ್ಮೆ ಚಿತ್ರಾಪುರ ಮಠಕ್ಕೆ ಭೇಟಿ ನೀಡುತ್ತಾರೆ. ಈ ಬಾರಿಯೂ ಮಠಕ್ಕೆ ಭೇಟಿ ನೀಡಿದ್ದ ಅವರು ಒಂದು ದಿನ ಅಲ್ಲಿಯೇ ತಂಗಿದ್ದರು. ಶುಕ್ರವಾರ ಮಠದಿಂದ ತೆರಳಿದ್ದಾರೆ.

    ಚಿತ್ರಾಪುರದಲ್ಲಿರುವ ಸಣ್ಣ ಕಿರಾಣಿ ಅಂಗಡಿಯಿಂದ ಮಗಳಿಗೆ ಚಾಕಲೊಟ್ ಹಾಗೂ ಪತ್ನಿ ರಾಧಿಕಾ ಪಂಡಿತ್ ಅವರಿಗೆ ಐಸ್‌ ಕ್ಯಾಂಡಿ ಕೊಡಿಸಿದ್ದಾರೆ. ದಂಪತಿಯು ಅಂಗಡಿಯ ಎದುರು ನಿಂತ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

    Share Information
    Advertisement
    Click to comment

    You must be logged in to post a comment Login

    Leave a Reply