LATEST NEWS
ಯಕ್ಷಗಾನ ಕಲಾವಿದನ ಮೇಲೆ ದೈವ ಆವಾಹನೆ…ಅಬ್ಬರಕ್ಕೆ ಬೆದರಿದ ಜನತೆ

ಕುಂದಾಪುರ ಮಾರ್ಚ್ 12: ಇತ್ತೀಚೆಗೆ ಮಂಡ್ಯ ಜಿಲ್ಲೆಯಲ್ಲಿ ನಡೆದ ನಾಟಕ ಪ್ರದರ್ಶನ ವೇಳೆ ದೇವಿ ಪಾತ್ರದಾರಿಯೊಬ್ಬರಿಗೆ ದೇವಿ ಆವಾಹನೆ ಆಗಿರುವ ವಿಡಿಯೋ ಒಂದು ವೈರಲ್ ಆಗಿತ್ತು, ಇದೀಗ ಕರಾವಳಿಯ ಯಕ್ಷಗಾನದಲ್ಲೂ ಕಲಾವಿದರೊಬ್ಬರ ಮೇಲೆ ದೈವವೊಂದು ಆವಾಹನೆ ಆಗಿರುವ ವಿಡಿಯೋ ಈಗ ವೈರಲ್ ಆಗಿದ್ದು , ಬಾರಿ ಸುದ್ದಿಯಾಗಿದೆ.
ಬಡಗುತಿಟ್ಟುವಿನ ಪ್ರಸಿದ್ಧ ಹಟ್ಟಿಯಂಗಡಿ ಮೇಳದಿಂದ ಜಿಲ್ಲೆಯ ದೈವದ ಮಹಿಮೆಗೆ ಸಂಬಂಧಪಟ್ಟ ಯಕ್ಷಗಾನ ಪ್ರಸಂಗವೊಂದು ನಡೆದಿದೆ., ಈ ಸಂದರ್ಭ ಖ್ಯಾತ ಯಕ್ಷಗಾನ ಕಲಾವಿದ ಯೋಗಿಶ್ ಪೂಜಾರಿ ಅವರು ದೈವದ ವೇಷ ಧರಿಸಿ, ದೀವಟಿಕೆ ಹಿಡಿದುಕೊಂಡು ಅಬ್ಬರಿಸುತ್ತಾ ರಂಗಸ್ಥಳ ಪ್ರವೇಶಕ್ಕೆ ಆಗಮಿಸಿದ್ದಾರೆ. ಆದರೆ ಇನ್ನೇನು ರಂಗಸ್ಥಳ ಪ್ರವೇಶಬೇಕೆನ್ನುವ ಸಂದರ್ಭದಲ್ಲೇ ಕಲಾವಿದ ಯೋಗಿಶ್ ಪೂಜಾರಿ ಅವರ ಮೈಮೇಲೆ ದೈವ ಆವಾಹನೆ ಆಗಿದೆ.

ದೈವ ಆವಾಹನೆ ಆಗುತ್ತಿದ್ದಂತೆ ದೀವಟಿಕೆ ಹಿಡಿದುಕೊಂಡಿದ್ದ ಸಹಾಯಕ ಕೂಡಲೇ ದೀವಟಿಕೆಯನ್ನು ಕಲಾವಿದ ಯೋಗಿಶ್ ಪೂಜಾರಿ ಅವರಿಂದ ಎಳೆದು ತೆಗೆದುಕೊಂಡಿದ್ದಾರೆ. ಯಕ್ಷಗಾನ ಕಲಾವಿದನ ಮೇಲೆ ಬಂದ ದೈವದ ಅಬ್ಬರಕ್ಕೆ ನೆರೆದಿದ್ದ ಜನರು ಬೆಚ್ಚಿಬಿದ್ದಿದ್ದಾರೆ. ಸದ್ಯ ಈ ವಿಡಿಯೋ ಬಾರೀ ವೈರಲ್ ಆಗಿ ದೈವ ಆವಾಹನೆ ಈ ಕುರಿತು ಈಗ ಚರ್ಚೆ ನಡೆಯುತ್ತಿದೆ.