Connect with us

    LATEST NEWS

    ಯಕ್ಷಗಾನ ರಂಗದ ಪಾರಂಪರಿಕ ಶೈಲಿಯ ಅಗ್ರಮಾನ್ಯ ಸ್ತ್ರೀವೇಷಧಾರಿ ಮಾರ್ಗೋಳಿ ಗೋವಿಂದ ಶೇರಿಗಾರ್ ನಿಧನ

    ಉಡುಪಿ ಜನವರಿ 24: ಯಕ್ಷಗಾನದ ಪ್ರಸಿದ್ದ ಸ್ತ್ರೀವೇಷಧಾರಿ ಮಾರ್ಗೋಳಿ ಗೋವಿಂದ ಶೇರಿಗಾರ್ (96) ಭಾನುವಾರ ರಾತ್ರಿ ನಿಧನರಾದರು. ಕುಂದಾಪುರ ತಾಲ್ಲೂಕಿನ ಬಸ್ರೂರಿನ ಮಾರ್ಗೋಳಿಯ ಗೋವಿಂದ ಶೇರಿಗಾರರು ಬಡಗು ನಡುತಿಟ್ಟು ಯಕ್ಷಗಾನ ರಂಗ ಕಂಡ ಪಾರಂಪರಿಕ ಶೈಲಿಯ ಅಗ್ರಮಾನ್ಯ ಸ್ತ್ರೀವೇಷಧಾರಿಗಳಲ್ಲಿ ಪ್ರಮುಖರು.


    ನಿರಂತರ 53 ವರ್ಷಗಳ ತಿರುಗಾಟದಲ್ಲಿ ಮಂದಾರ್ತಿ, ಮಾರಣಕಟ್ಟೆ ,ಅಮೃತೇಶ್ವರಿ, ಸೌಕೂರು, ಇಡಗುಂಜಿ ಮೇಳಗಳಲ್ಲಿ ತಿರುಗಾಟ ಮಾಡಿದ ಶೇರಿಗಾರರು 26 ವರ್ಷಗಳ ತಿರುಗಾಟವನ್ನು ಮಾರಣಕಟ್ಟೆ ಮೇಳದಲ್ಲೇ ಮಾಡಿದ್ದು ವಿಶೇಷ.
    5 ದಶಕಗಳ ಕಾಲ ನಿರಂತರವಾಗಿ ಸ್ತ್ರೀ ವೇಷಧಾರಿಯಾಗಿದ್ದ ಮಾರ್ಗೋಳಿಯವರು ರಂಗದಲ್ಲಿ ಶಶಿಪ್ರಭೆ ಮೀನಾಕ್ಷಿ, ಚಿತ್ರಾಂಗದೆ, ಪ್ರಭಾವತಿ, ಮೋಹಿನಿ ,ದಮಯಂತಿ, ಸುಗರ್ಭೆ, ಸುಭದ್ರೆ ,ಮದನಾಕ್ಷಿ, ತಾರಾವಳಿ, ಕೈಕೆ, ದೇವಿ ಮುಂತಾದ ವಿಭಿನ್ನ ಸ್ವಭಾವದ ಸ್ತ್ರೀ ವೇಷಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply