LATEST NEWS
ರಂಗಸ್ಥಳದಲ್ಲಿ ಕುಸಿದು ಬಿದ್ದ ಅರ್ಜುನ ಪಾತ್ರಧಾರಿ…!!

ಮೂಡುಬಿದಿರೆ: ಮೂಡುಬಿದಿರೆಯಲ್ಲಿ ನಡೆದ ಕರ್ಣಾರ್ಜುನ ಯಕ್ಷಗಾನದ ಸಂದರ್ಭ ಅರ್ಜುನನ ವೇಷಧಾರಿ ಅಮ್ಮುಂಜೆ ಮೋಹನ್ ಕುಮಾರ್ ಅವರು ನಿಂತಲ್ಲಿಗೆ ತಲೆಸುತ್ತು ಬಂದು ಕುಸಿದು ಬಿದ್ದ ಘಟನೆ ನಡೆದಿದೆ.
ಮೂಡಬಿದಿರೆಯ ಅಲಂಗಾರು ಮಹಾಲಿಂಗೇಶ್ವರ ದೇವಾಲಯದಲ್ಲಿ ಸೋಮವಾರ ರಾತ್ರಿ ನಡೆದ ಕರ್ಣಾರ್ಜುನ ಯಕ್ಷಗಾನದ ಸಂದರ್ಭ ರಂಗಸ್ಥಳದಲ್ಲಿ ಅರ್ಜುನ ಪಾತ್ರಧಾರಿ ಅಮ್ಮುಂಜೆ ಮೋಹನ್ ಕುಮಾರ್ ಕುಸಿದು ಬಿದ್ದಿದ್ದಾರೆ. ತಲೆ ಸುತ್ತು ಬಂದು ಬಿದ್ದ ಅವರು, ಬಳಿಕ ಚೇತರಿಸಿಕೊಂಡು ರಂಗ ಪ್ರದರ್ಶನ ನೀಡಿದ್ದಾರೆ.

ಅಮ್ಮುಂಜೆ ಮೋಹನ್ ಅವರು ಸುಪ್ರಸಿದ್ಧ ಪುಂಡು ವೇಷಧಾರಿಯಾಗಿದ್ದು, ಎರಡೂವರೆ ದಶಕಗಳಿಂದ ಯಕ್ಷಗಾನದಲ್ಲಿ ಇದ್ದಾರೆ. ಈ ಯಕ್ಷಗಾನವು ಫೇಸ್‌ಬುಕ್‌ನಲ್ಲಿ ಲೈವ್ ಆಗುತ್ತಿದ್ದು, ಘಟನೆಯನ್ನು ಕಂಡ ಅಭಿಮಾನಿಗಳು ಬೇಗನೇ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.