Connect with us

    LATEST NEWS

    70 ವರ್ಷದ ವೃದ್ದೆಯ ಕಣ್ಣಲ್ಲಿತ್ತು 9 ಸೆಂ.ಮೀ ಉದ್ದದ ಹುಳು…!!

    ಉಡುಪಿ ಜೂನ್ 7: ವೃದ್ದೆಯೊಬ್ಬರ ಕಣ್ಣಿನಿಂದ 9 ಸೆಂಟಿ ಮೀಟರ್ ಉದ್ದದ ಜೀವಂತ ಹುಳವನ್ನು ತೆಗೆಯುವಲ್ಲಿ ಪ್ರಸಾದ್ ನೇತ್ರಾಲಯದ ವೈದ್ಯರು ಯಶಸ್ವಿಯಾಗಿದ್ದಾರೆ.


    ಎಡ ಕಣ್ಣಿನ ನೋವಿನಿಂದ ನರಳುತ್ತಿದ್ದ 70 ವರ್ಷದ ವೃದ್ದೆಯೊಬ್ಬರು ಜೂನ್ 1 ರಂದು ಪ್ರಸಾದ್ ನೇತ್ರಾಲಯಕ್ಕೆ ಆಗಮಿಸಿದ್ದರು. ಆ ಸಂದರ್ಭ ನೇತ್ರ ತಜ್ಞರಾದ ಕೃಷ್ಣ ಪ್ರಸಾದ್ ಅವರು ರೋಗಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ರೋಗಿಯ ಅಕ್ಷಿಪಟಲದ ಸುತ್ತ ಜೀವಂತ ಹುಳವೊಂದು ತಿರುಗುತ್ತಲೇ ಇರುವುದನ್ನು ಗಮನಿಸಿದ್ದಾರೆ.

    ಈ ಹಿನ್ನಲೆ ತುರ್ತು ಚಿಕಿತ್ಸೆಗೆ ಮುಂದಾದ ವೈದ್ಯರು ತಡಮಾಡಿದರೆ ಈ ಹುಳು ಮೆದುಳು ಪ್ರವೇಶಿಸಿದರೆ ಮತ್ತಷ್ಟು ಅಪಾಯವೆಂದು ಅರಿತ ಡಾ. ಕೃಷ್ಣಪ್ರನಾದ್ ಮತ್ತು ಅವರ ಸಹ ವೈದ್ಯರಾದ ಡಾ. ಅಪರ್ಣಾ ನಾಯಕ್ ಇವರನ್ನೊಳಗೊಂಡ ತಂಡ ನೇತ್ರ ಚಿಕಿತ್ಸೆಗೆ ಸಿದ್ಧತೆ ನಡೆಸಿತು, ಹುಳವನ್ನುತಕ್ಷಣ ನಿಷ್ಕ್ರಿಯಗೊಳಿಸಲು ಔಷಧಿಯನ್ನು ನೀಡಲಾಯಿತು. ಇದರ ಪರಿಣಾಮವೋ ಏನೋ ಎಡಗಣ್ಣಿನಲ್ಲಿದ್ದ ಹುಳು ಕಾಣದಾಯಿತು. ಕಣ್ಣು ನೋವು ಮಾಯವಾಯಿತು. ಅಲ್ಲದೇ ಹುಳ ಸತ್ತಿರಬಹುದು ಎಂದು ಅಂದಾಜಿಸಲಾಯಿತು.

    ಆದರೆ ನಿನ್ನೆ ಮತ್ತೆ ವೃದ್ದೆಗೆ ಕಣ್ಣು ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಆಗಮಿಸಿದ ಸಂದರ್ಭ ಕರೆಗೆ ತುರ್ತಾಗಿ ಸ್ಪಂಧಿಸಿದ ಡಾ. ಕೃಷ್ಣಪ್ರಸಾದ್ ತಂಡ ತಡಮಾಡದೆ, ಈ ಬಾರಿ ಆಪರೇಶನ್ ಕೊಠಡಿಗೆ ಹೋಗದೆ, ಹೊರರೋಗಿ ವಿಭಾಗದಲ್ಲಿಯೇ ತುರ್ತು ಚಿಕಿತ್ಸೆ ಮಾಡಿಯೇ ಬಿಟ್ಟರು. ಆಶ್ಚರ್ಯವೆಂಬಂತೆ ಸುಮಾರು 9 . ಮೀ. ಉದ್ದದ ಜೀವಂತ ಹುಳು ಹೊರಬಂತು.

    26 ವರ್ಷಗಳ ಅನುಭವದಲ್ಲಿ ಒಮ್ಮೆ ರೆಟಿನಾ ಹಿಂದಿನಿಂದ ಹಾಗೂ ಕಣ್ಣಿನ ಕುಣಿಕೆಯಿಂದ ಹದಿನೈದು ವರ್ಷಗಳ ಹಿಂದೆ ವಿಭಿನ್ನ ರೀತಿಯ ಹುಳವನ್ನು ಶಸ್ತ್ರ ಚಿಕಿತ್ಸೆ ನಡೆಸಿ ಹೊರ ತೆಗೆದ್ದಿದ್ದವು. ಆದರೆ ಭಾನುವಾರ ಹೊರತೆಗೆದ ಹುಳು ನೇತ್ರದ ಹೊರಪದರದಿಂದ ಹೊರತೆಗೆದ ಪ್ರಥಮ ಹುಳುವಾಗಿದೆ ಈ ಹುಳದ ಕುರಿತಾಗಿ ಮತ್ತಷ್ಟು ಅಧ್ಯಯನ ನಡೆಸಲು ಪ್ರಾಯೋಗಾಲಯಕ್ಕೆ ಕಳುಹಿಸಲಾಗಿದೆ, ಅಲ್ಲಿಂದ ಮಾಹಿತಿ ಬರಬೇಕಾಗಿದೆ” ಎಂದು ಡಾ. ಕೃಷ್ಣಪ್ರಸಾದ್ ಅವರು ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply