Connect with us

    LATEST NEWS

    105ನೇ ವಯಸ್ಸಿನಲ್ಲಿ 7ನೇ ತರಗತಿ ಪಾಸಾಗಿದ್ದ ಹಿರಿಯ ವಿದ್ಯಾರ್ಥಿನಿ ಭಾಗೀರಥಿಅಮ್ಮ ಇನ್ನಿಲ್ಲ

    ಕೇರಳ ಜುಲೈ 23: ತನ್ನ 105ನೇ ವಯಸ್ಸಿನಲ್ಲಿ ಸಾಕ್ಷರತಾ ಪರೀಕ್ಷೆ ಬರೆದು 7ನೇ ತರಗತಿಯಲ್ಲಿ ಉತ್ತೀರ್ಣರಾಗಿ, ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರಶಂಸೆ ಗಳಿಸಿದ್ದ, ನಾರಿಶಕ್ತಿ ಪ್ರಶಸ್ತಿ ಪುರಸ್ಕೃತೆ, ಕೇರಳದ ಹಿರಿಯ ವಿದ್ಯಾರ್ಥಿನಿ ಭಾಗೀರಥಿ ಅಮ್ಮ(107) ವಯೋಸಹಜ ಕಾರಣಗಳಿಂದ ಗುರುವಾರ ರಾತ್ರಿ ನಿಧನರಾಗಿದ್ದಾರೆ.


    ಕೊಲ್ಲಂ ಜಿಲ್ಲೆಯ ಪ್ರಕುಲಂನ ಶತಾಯುಷಿ ಭಾಗೀರಥಿ ಅಮ್ಮ, 2019 ರಲ್ಲಿ ಕೇರಳ ರಾಜ್ಯ ಸಾಕ್ಷರತಾ ಮಿಷನ್ (ಕೆಎಸ್‌ಎಲ್‌ಎಂ) ನಡೆಸಿದ ನಾಲ್ಕನೇ ತರಗತಿಯ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಕೊಲ್ಲಂನಲ್ಲಿ ರಾಜ್ಯ ಸಾಕ್ಷರತಾ ಮಿಷನ್ ನಡೆಸಿದ ಪರೀಕ್ಷೆಗೆ ಹಾಜರಾಗಿದ್ದ ಇವರು, 275 ಅಂಕಗಳಿಗೆ 205 ಅಂಕಗಳನ್ನು ಪಡೆದಿದ್ದರು. ಗಣಿತದಲ್ಲಿ ಪೂರ್ಣ ಅಂಕ ಪಡೆದಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply