Connect with us

    LATEST NEWS

    ಎಪ್ರಿಲ್ 23 ರಂದು ಜಗತ್ತು ನಾಶ : ಧರ್ಮ ವಿದ್ವಾಂಸರಿಂದ ಎಚ್ಚರಿಕೆಯ ಸಂದೇಶ

    ಎಪ್ರಿಲ್ 23 ರಂದು ಜಗತ್ತು ನಾಶ : ಧರ್ಮ ವಿದ್ವಾಂಸರಿಂದ ಎಚ್ಚರಿಕೆಯ ಸಂದೇಶ

    ವಾಷಿಂಗ್ಟನ್, ಎಪ್ರಿಲ್ 13 : ಇದೇ ಎಪ್ರಿಲ್ 23 ರಂದು ಜಗತ್ತು ಅಂತ್ಯವಾಗಲಿದೆ ಎಂದು ಧರ್ಮ ಜ್ಯೋತಿಷ್ಯರು ಭವಿಷ್ಯ ನುಡಿದಿದ್ದಾರೆ.

    ಇದು ಇದೇ ಎಪ್ರಿಲ್ ತಿಂಗಳ 23 ರಂದು ವರ ನಟ ರಾಜ ಕುಮಾರ್ ಮತ್ತು ಕ್ರಿಕಟ್ ತಾರೆ ಸಚಿನ್ ತೆಂಡೂಲ್ಕರ್ ಅವರ ಜನ್ಮದಿನದ ಒಂದು ದಿನ ಮುಂಚಿತವಾಗಿಯೇ ಜಗತ್ತು ನಾಶವಾಗಲಿದೆ ಎಂದು ಪಾಶ್ಚಿಮಾತ್ಯ  ಧರ್ಮ ವಿದ್ವಾಂಸರು ಭವಿಷ್ಯ ನುಡಿದಿದ್ದಾರೆ.

    ಇದಕ್ಕೆ ಪಾಶ್ಚಿಮಾತ್ಯ ದೇಶಗಳಲ್ಲಿರುವ ಕಾನ್ಸ್ ಪೆರೆಸಿ ಥಿಯರಿ ಎಂಬ ಸರಣಿ ಸಿದ್ದಾಂತಗಳೇ ಕಾರಣ ಎಂದು ಹೇಳಲಾಗಿದೆ.

    ಈ ಜನರು ಬಲವಾಗಿ ನಂಬುವ 12:1-2 ರ ಪ್ಯಾರದಲ್ಲಿ , ಪ್ರಸವ ವೇದನೆಯಲ್ಲಿರುವ ಮಹಿಳೆಯೊಬ್ಬಳು ತನ್ನ ತಲೆಯ ಮೇಲೆ ಸೂರ್ಯನನ್ನೂ, ತನ್ನ  ಕಾಲ ಕೆಳಗೆ ಚಂದ್ರನನ್ನೂ ಇರಿಸಿಕೊಂಡಿರುವ ಬಗ್ಗೆ ಪ್ರಸ್ತಾಪಿಸಲಾಗಿದೆ.

    ಇಲ್ಲಿ ಆ ಮಹಿಳೆ ಕನ್ಯಾ ರಾಶಿಯ ಪ್ರತಿ ರೂಪ ಎಂದು ಹೇಳಿರುವುದರಿಂದ, ಸೂರ್ಯ, ಚಂದ್ರರು ಕನ್ಯಾ ರಾಶಿಗೆ ಪ್ರವೆಶಿಸಿದರೆ ಈಗಿರುವ ಜಗತ್ತು ನಾಶವಾಗಲಿದೆ ಮತ್ತು ಹೊಸ ಜಗತ್ತು ಸೃಷ್ಟಿಯಾಗಲಿದೆ.

    ಆಗ 2ನೇ ಬಾರಿಗೆ ಹುಟ್ಟಿ ಬರುವ ಯೇಸುಕ್ರಿಸ್ತರನ್ನು ನವ ಜಗತ್ತು ನಗು ನಗುತ್ತಾ ಸ್ವಾಗತಿಸಲಿದೆ ಎಂದು ಹೇಳಲಾಗಿದೆ.

    ಈ ಹಿನ್ನೆಲೆಯಲ್ಲಿ ಇದೇ ತಿಂಗಳ 23 ರಂದು ಸೂರ್ಯ, ಚಂದ್ರರು ಕನ್ಯಾ ರಾಶಿ ಪ್ರವೇಶಿಸುತ್ತಿರುವುದರಿಂದ ಅಂದು ಪ್ರಳಯ ನಿಶ್ಚಿತ ಎಂದು ಹೇಳಲಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *