LATEST NEWS
ಅಕ್ರಮ ಚಿನ್ನ ಸಾಗಾಟದ ವಿಡಿಯೋ ಇದೆ..ಆದರೆ ಏನು ಮಾಡಲಾಗದ ಸ್ಥಿತಿ ಪೊಲೀಸರಿಗೆ…!!

ನವದೆಹಲಿ: ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದರೂ ಇಲ್ಲಿ ಪೊಲೀಸರು ಎನು ಮಾಡಲಾಗದ ಸ್ಥಿತಿಯಲ್ಲಿದ್ದಾರೆ. ಸ್ವತಃ ಐಪಿಎಸ್ ಅಧಿಕಾರಿಯೊಬ್ಬರು ಈ ಕಳ್ಳ ಸಾಗಾಣಿಕೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ..ಅತಿ ಕಿರಿಯ ಚಿನ್ನ ಕಳ್ಳ ಸಾಗಾಣಿಕೆದಾರರು ಎಂದು ಬರೆದಿದ್ದಾರೆ. ಹೌದು, ಯಾವುದೇ ವಸ್ತು ಕಳ್ಳತನವಾಗಲಿ ಪೊಲೀಸರು ಮೊದಲು ಪ್ರಕರಣ ದಾಖಲಿಸಿಕೊಳ್ಳುತ್ತಾರೆ. ಬಳಿಕ ಕದ್ದು ವಸ್ತುವನ್ನು ವಶಕ್ಕೆ ಪಡೆದು, ಖದೀಮರನ್ನು ಕಂಬಿ ಹಿಂದೆ ತಳ್ಳುತ್ತಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಇರುವೆಗಳ ಗುಂಪು ಚಿನ್ನದ ಸರವನ್ನು ಕದ್ದೊಯ್ಯುತ್ತಿರುವ ದೃಶ್ಯ ಎಲ್ಲರ ಗಮನ ಸೆಳೆದಿದೆ. ಈ ವಿಡಿಯೋವನ್ನು ಛತ್ತೀಸ್ಗಢದ ಐಪಿಎಸ್ ಅಧಿಕಾರಿ ದಿಪಾನ್ಶು ಕಬ್ರಾ ಅವರು ತಮ್ಮ ಟ್ವಿಟರ್ನಲ್ಲಿ ಮಾರ್ಚ್ 24ರಂದು ಶೇರ್ ಮಾಡಿಕೊಂಡಿದ್ದಾರೆ. ಕೆಲವು ಇರುವೆಗಳು ಚಿನ್ನದ ಸರವನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯವಿದೆ.

15 ಸೆಕೆಂಡ್ ವಿಡಿಯೋಗೆ ಅತ್ಯಂತ ಕಿರಿಯ ಚಿನ್ನ ಕಳ್ಳಸಾಗಾಣೆಗಾರರು ಎಂದು ಶೀರ್ಷಿಕೆ ನೀಡಲಾಗಿದೆ. ಇದೀಗ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಹಾಸ್ಯಾತ್ಮಕ ಕಾಮೆಂಟ್ಗಳನ್ನು ಹರಿಬಿಟ್ಟಿದ್ದಾರೆ. ಕಳ್ಳ ಇರುವೆಗಳನ್ನು ಬಂಧಿಸಲಾಗಿದೆಯೇ? ಅಥವಾ ಅವರು ಎಸ್ಕೇಪ್ ಆದರಾ? ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.