UDUPI
ತಂಬಾಕು ರಹಿತ ದಿನಾಚರಣೆ- ಜೇಡಿ ಮಣ್ಣಿನ ಕಲಾ ಪ್ರಾತ್ಯಕ್ಷಿಕೆ
ತಂಬಾಕು ರಹಿತ ದಿನಾಚರಣೆ- ಜೇಡಿ ಮಣ್ಣಿನ ಕಲಾ ಪ್ರಾತ್ಯಕ್ಷಿಕೆ
ಉಡುಪಿ ಮೇ 31: ವಿಶ್ವ ತಂಬಾಕು ರಹಿತ ದಿನಾಚರಣೆಯಂದು ತಂಬಾಕಿನಿಂದ ಸಂಭವಿಸುವ ದುಷ್ಪರಿಣಾಮಗಳವನ್ನು ಮನೋಜ್ಞವಾಗಿ ಬಿಂಬಿಸಲು ಜಿಲ್ಲಾ ಆಸ್ಪತ್ರೆ ಆವರಣ ಅಜ್ಜರಕಾಡಿನಲ್ಲಿ ಜೇಡಿ ಮಣ್ಣಿನ ಕಲಾ ಪ್ರಾತ್ಯಕ್ಷಿಕೆಯನ್ನು ಅಪರ ಜಿಲ್ಲಾಧಿಕಾರಿ ಅನುರಾಧ ಅವರು ಅನಾವರಣಗೊಳಿಸಿದರು.
ಜಿಲ್ಲೆಯನ್ನು ತಂಬಾಕು ಮುಕ್ತವಾಗಿಸುವ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾಡಳಿತ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಧೂಮಪಾನದಿಂದಾಗುವ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳನ್ನು ಒಂದು ಕಲಾಕೃತಿಯ ಮೂಲಕ ಬಿಂಬಿಸಲಾದ ಯತ್ನ ಉತ್ತಮವಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳು ಹೇಳಿದರು.
ನಮ್ಮ ಹೃದಯ, ಶ್ವಾಸಕೋಶ ಮತ್ತು ಹೃದಯದ ಕಾಯಿಲೆಗಳ ಕುರಿತು ಕಲಾಕೃತಿಯ ಮೂಲಕ ಅರಿವು ಮೂಡಿಸಲಾಗಿದೆ.