UDUPI
ವಿಶ್ವ ಬೈಸಿಕಲ್ ದಿನಾಚರಣೆ
ಉಡುಪಿ, ಜೂನ್ 5 : ಜಿಲ್ಲಾ ಪಂಚಾಯತ್,ಜಿಲ್ಲಾ ಆರೋಗ್ಯ ಮತ್ತು ಕುಂಟುAಬ ಕಲ್ಯಾಣ ಇಲಾಖೆ,ಸೈಕಲ್ ಕ್ಲಬ್ ಉಡುಪಿ,ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿ ಹಾಗೂ ಜಿಲ್ಲಾ ಎನ್.ಸಿ.ಡಿ ಘಟಕ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಬೈಸಿಕಲ್ ದಿನಾಚರಣೆ ಪ್ರಯುಕ್ತ ಬೈಸಿಕಲ್ ಜಾಥಾ ಆಯೋಜಿಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ್ ಉಡುಪ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಆಹಾರ ಕ್ರಮದಲ್ಲಾದ ಬದಲಾವಣೆ ,ತಂಬಾಕು ಸೇವನೆ, ಮದ್ಯಪಾನ,ದೈಹಿಕ ಚಟುವಟಿಕೆಗಳ ಕೊರತೆ ಹಾಗೂ ಪರಿಸರ ಮಾಲಿನ್ಯದಿಂದ ಹೆಚ್ಚಿನ ಜನರು ಅಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ.ಇದರ ಬಗ್ಗೆ ಅರಿವನ್ನು ಮೂಡಿಸುವ ಉದ್ದೇಶದಿಂದ ಸೈಕಲ್ ಜಾಥಾವನ್ನು ಆಯೋಜಿಲಾಗುತ್ತದೆ ಎಂದರು.
ಜಿಲ್ಲಾ ಸರ್ವೇಕ್ಷಣಾ ಘಟಕದ ಜಿಲ್ಲಾ ಎನ್ ಸಿ ಡಿ ವಿಭಾಗದ ಡಾ.ಅಂಜಲಿ , ದೇಹ ಮತ್ತು ಮನಸ್ಸಿನ ಮೇಲಾಗುವ ಸಕರಾತ್ಮಕ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಸೈಕಲ್ ಕ್ಲಬ್ ಸಂಚಾಲಕ .ಗುರುರಾಜ್,ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ ಉಪಾದ್ಯಾಯ ಉಪಸ್ಥಿತರಿದ್ದರು. ಅಂಬಲಪಾಡಿ ಜಂಕ್ಷನ್ ನಿಂದ ಪ್ರಾರಂಭಗೊಂಡ ಜಾಥಾವು ರಾಷ್ಟ್ರೀಯ ಹೆದ್ದಾರಿ ಮೂಲಕ ಕಾಪು ಮಾರ್ಗವಾಗಿ ಪಡುಕೆರೆ ಬೀಚ್ ಮುಂಖಾತರ ಸಾಗಿ ತೊಟ್ಟಂ ಆಸರೆ ಬೀಚ್ ನಲ್ಲಿ ಮುಕ್ತಾಯಗೊಂಡಿತು.