LATEST NEWS
ರೇಪ್ ಆಗಿಲ್ಲ ಎಂದು ಕ್ಷಮೆ ಕೇಳಿದ ಮಹಿಳೆ

ಹೈದರಾಬಾದ್: ದೇಶದಾದ್ಯಂತ ಭಾರಿ ಸುದ್ದಿ ಮಾಡಿದ್ದ ಮಹಿಳೆಯೊಬ್ಬರ ಅತ್ಯಾಚಾರ ಪ್ರಕರಣದಲ್ಲಿ ಈಗ ಟ್ವಿಸ್ಟ್ ಸಿಕ್ಕಿದ್ದು, 100ಕ್ಕೂ ಅಧಿಕ ಮಂದಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದ ಮಹಿಳೆ ಈಗ ನನ್ನ ಮೇಲೆ ರೇಪ್ ಆಗಿಲ್ಲ ಎಂದು ಹೇಳುವ ಮೂಲಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ನೀಡಿದ್ದಾಳೆ.
ಕಳೆದ ವಾರ 25ವರ್ಷದ ಮಹಿಳೆ ಹೈದರಾಬಾದ್‍ನ ಪಂಜಾಗುಟ್ಟ ಪೊಲೀಸ್ ಠಾಣೆಗೆ ಆಗಮಿಸಿ 42 ಪುಟಗಳ ದೂರು ದಾಖಲಿಸಿದ್ದರು, ಅದರಲ್ಲಿ 139 ಮಂದಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಳು. ಇದರಲ್ಲಿ ಕೆಲ ಮಹಿಳೆಯರ ಹೆಸರು ಕೂಡ ಇತ್ತು. 2010 ರಿಂದ ತನ್ನ ಮೇಲೆ ಅತ್ಯಾಚಾರ ಎಸಗಿದ್ದು, ಜೊತೆಗೆ ಬೆದರಿಕೆ ಮತ್ತು ಶೋಷಣೆಗೆ ಒಳಗಾಗಿದ್ದೆ ಎಂದು ಹೇಳಿದ್ದಳು. 2010ರಲ್ಲಿ ಮದುವೆಯಾಗುವ ಮುನ್ನ ಹಾಗೂ ಆ ಬಳಿವೂ ತನ್ನ ಮೇಲೆ ದೌರ್ಜನ್ಯ ನಡೆದಿತ್ತು ಎಂದಿದ್ದಳು.

ಈಗ ತನ್ನ ಆರೋಪಗಳ ಕುರಿತು ಮಾಧ್ಯಮಗಳ ಎದುರು ಮಾತನಾಡಿರುವ ಆಕೆ, ಬಲವಂತವಾಗಿ ತನ್ನ ದೂರಿನಲ್ಲಿ ಕೆಲ ಪ್ರಮುಖ ವ್ಯಕ್ತಿಗಳ ಹೆಸರನ್ನು ನೀಡಿದ್ದಾಗಿ ಬಹಿರಂಗಪಡಿಸಿದ್ದಾಳೆ. ಅಲ್ಲದೇ ಡಾಲರ್ ಬಾಯ್ ಅಲಿಯಾಸ್ ರಾಜಶೇಖರ್ ರೆಡ್ಡಿ ನನ್ನನ್ನು ಹಿಂಸಿಸಿ, ನನ್ನ ಹೆತ್ತರವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ಆಕೆ ಹೇಳಿದ್ದಾಳೆ. ಪ್ರಕರಣದಲ್ಲಿ ತಪ್ಪಾಗಿ ಹೆಸರಿಸಿದ್ದ ವ್ಯಕ್ತಿಗಳ ಕ್ಷಮೆಯನ್ನು ಕೋರಿದ್ದಾಳೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಬಳಿಕ ವಿಚಾರಣೆ ಮುಂದುವರಿಸಿದ್ದರು. ದೂರಿನಲ್ಲಿ ನೀಡಿದ್ದ ವ್ಯಕ್ತಿಗಳಲ್ಲಿ ಕೆಲ ವಿದ್ಯಾರ್ಥಿಗಳು, ವೈದ್ಯರು, ಮಾಧ್ಯಮ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದವರು ಸೇರಿದಂತೆ ಖ್ಯಾತ ವಾಹಿನಿಯೊಂದರ ಆ್ಯಂಕರ್ ಮೇಲೆ ಕೂಡ ಆರೋಪ ಮಾಡಲಾಗಿತ್ತು. ಸದ್ಯ ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಮಹಿಳೆ ನೀಡಿದ್ದ ದೂರಿನ ಹಿಂದಿನ ನೈಜ ಸಂಗತಿ ಬೆಳಕಿಗೆ ಬಂದಿದ್ದು, ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ