KARNATAKA
ಅನೈತಿಕ ಸಂಬಂಧದ ಅಪಪ್ರಚಾರಕ್ಕೆ ಮನನೊಂದು ಇಬ್ಬರು ಮಕ್ಕಳೊಂದಿಗೆ ಮಹಿಳೆ ಆತ್ಮಹತ್ಯೆ

ಶಿವಮೊಗ್ಗ: ಕೊಟ್ಟ ಸಾಲವನ್ನು ವಾಪಾಸ್ ಕೇಳಿದ್ದಕ್ಕೆ ಸಾಲ ತೆಗೆದುಕೊಂಡವರು ಅನೈತಿಕ ಸಂಬಂಧ ಎಂದು ಅಪಪ್ರಚಾರ ಮಾಡಿದ ಕಾರಣಕ್ಕೆ ಮಹಿಳೆಯೊಬ್ಬರು ತನ್ನ ಇಬ್ಬರು ಸಣ್ಣ ಮಕ್ಕಳೊಂದಿಗೆ ಸಿದ್ದಾಪುರ ಬಳಿಯ ಭದ್ರ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವೀಣಾ(32), ವರ್ಷ(7), ಹಾಗೂ 1 ವರ್ಷದ ಹೆಣ್ಣು ಮಗು ಮೃತ ದುರ್ದೈವಿಗಳು. ಸಂತೋಷ್ ಎಂಬ ವ್ಯಕ್ತಿಗೆ ವೀಣಾ 8 ಲಕ್ಷ ರೂ. ಸಾಲ ನೀಡಿದ್ದರು. ಸಾಲದ ಹಣವನ್ನು ವೀಣಾ ಸಂತೋಷ್‌ನಿಂದ ವಾಪಾಸ್ ಕೇಳಿದಾಗ ಆತ ವೀಣಾ ವಿರುದ್ಧ ಅನೈತಿಕ ಸಂಬಂಧದ ಬಗ್ಗೆ ಅಪಪ್ರಚಾರ ಮಾಡಿದ್ದಾನೆ

ಇದರಿಂದ ಮನನೊಂದ ವೀಣಾ ತನ್ನ ಇಬ್ಬರು ಮಕ್ಕಳೊಂದಿಗೆ ಶುಕ್ರವಾರ ಸಿದ್ಧಾಪುರ ಬಳಿಯ ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶನಿವಾರ ಹೊನ್ನಾಳಿ ತಾಲೂಕಿನ ಯಕ್ಕನಹಳ್ಳಿ ಬಳಿ ವೀಣಾ ಮೃತದೇಹ ಪತ್ತೆಯಾಗಿದೆ. ಚನ್ನಗಿರಿ ತಾಲೂಕಿನ ನಲ್ಲೂರು ಬಳಿ 7 ವರ್ಷದ ಮಗುವಿನ ಮೃತದೇಹವೂ ದೊರಕಿದೆ. 1 ವರ್ಷದ ಮಗುವಿನ ಮೃತದೇಹಕ್ಕೆ ಶೋಧಕಾರ್ಯ ಮುಂದುವರಿದಿದೆ.