LATEST NEWS
ಅಟಲ್ ಸೇತು ಯಿಂದ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯ ತಲೆಕೂದಲು ಹಿಡಿದು ರಕ್ಷಿಸಿದ ಟ್ಯಾಕ್ಸಿ ಡ್ರೈವರ್ – ವಿಡಿಯೋ ವೈರಲ್
ಮುಂಬೈ ಅಗಸ್ಟ್ 17: ಮುಂಬೈಯ ಅಟಲ್ ಸೇತುವೆಯಿಂದ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಟ್ಯಾಕ್ಸಿ ಡ್ರೈವರ್ ಒಬ್ಬರು ಚಾಣಾಕ್ಷ್ಯತನದಿಂದ ಬದುಕಿಸಿದ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.
ಶುಕ್ರವಾರ ಸಂಜೆ ಸುಮಾರು 7 ಗಂಟೆಗೆ ಮುಲುಂದ್ ನಿವಾಸಿ ರೀಮಾ ಮುಕೇಶ್ ಪಟೇಲ್ ಅವರು ಅಟಲ್ ಸೇತುವಿಗೆ ಟ್ಯಾಕ್ಸಿ ಒಂದರಲ್ಲಿ ಆಗಮಿಸಿ ನವ ಶೇವಾ ಬದಿಯಲ್ಲಿ ವಾಹನ ನಿಲ್ಲಿಸುವಂತೆ ಸೂಚಿಸಿದ್ದರು. ನಂತರ ಸೇತುವೆ ಬದಿಗೆ ತೆರಳಿದ ಅವರು ಅಲ್ಲಿನ ರೈಲಿಂಗ್ನಲ್ಲಿ ಕುಳಿತಿದ್ದರು.
ಆ ಸಂದರ್ಭ ಅದೇ ಹಾದಿಯಲ್ಲಿ ಪೊಲೀಸ್ ಗಸ್ತು ವಾಹನ ತೆರಳುತ್ತಿದ್ದುದನ್ನು ಗಮನಿಸಿದ ಮಹಿಳೆ ಆಯತಪ್ಪಿ ಇನ್ನೇನು ಬೀಳಲಿದ್ದಾರೆನ್ನುವಾಗ ಟ್ಯಾಕ್ಸಿ ಚಾಲಕ ತಕ್ಷಣ ಆಕೆಯ ಕೂದಲು ಹಿಡಿದು ಮೇಲಕ್ಕೆತ್ತುವ ಯತ್ನ ನಡೆಸಿದ್ದರು. ತಕ್ಷಣ ನಾಲ್ಕು ಟ್ರಾಫಿಕ್ ಪೊಲೀಸರು ರೈಲಿಂಗ್ ಮೇಲೆ ಹತ್ತಿ ಆಕೆಯನ್ನು ಹಿಡಿದು ಮೇಲಕ್ಕೆತ್ತಿದ್ದಾರೆ.
#atelsetu #Mumbaipuneexpressway
ಅಟಲ್ ಸೇತುವೆಯಿಂದ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ರಕ್ಷಿಸಿದ ಟ್ಯಾಕ್ಸಿ ಡ್ರೈವರ್ pic.twitter.com/iq6LyASmol— themangaloremirror (@themangaloremir) August 17, 2024
You must be logged in to post a comment Login