LATEST NEWS
ಗಾಂಧೀಜಿಗೆ ಅಪಮಾನ ದೇಶದ್ರೋಹಗೈದಂತೆ – ಶಾಸಕ ಹರೀಶ್ ಪೂಂಜಾ ಮೇಲೆ ಸರಕಾರ ಸುಮೋಟೊ ಕೇಸು ದಾಖಲಿಸಲಿ
ಮಂಗಳೂರು ಅಗಸ್ಟ್ 17: ರಾಷ್ಟ್ರಪಿತ ಮಹಾತ್ಮಾಗಾಂಧಿಯವರನ್ನು ಅವಹೇಳನ ಮಾಡಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ದ ಸುಮೋಟೋ ಪ್ರಕರಣ ದಾಖಲಿಸಲಬೇಕೆಂದು ಮಾಜಿ ಸಚಿವ ರಮಾನಾಥ ರೈ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಈ ದೇಶಕ್ಕೆ ಅಹಿಂಸಾ ಮಾರ್ಗದಿಂದ ಸ್ವಾತಂತ್ರ್ಯ ದೊರಕಿದ್ದಲ್ಲ. ಚರಕದಿಂದ ಮಾತ್ರ ಸ್ವಾತಂತ್ರ್ಯ ಬಂದದ್ದಲ್ಲ ಎಂದು ಹರೀಶ್ ಪೂಂಜಾ ಹೇಳಿದ್ದಾರೆ. ಪ್ರಧಾನಿ ಮೋದಿಯವರು ವಿದೇಶದಿಂದ ಬರುವ ಗಣ್ಯರಿಗೆ ಚರಕವನ್ನು ತೋರಿಸಿ ಹೆಗ್ಗಳಿಕೆಯ ಮಾತುಗಳನ್ನು ಆಡುತ್ತಾರೆ. ಆದರೆ ಅವರ ಶಿಷ್ಯರು ಗಾಂಧೀಜಿಯವರಿಗೆ ಅಪಮಾನ ಮಾಡುವ ಕೆಲಸ ಮಾಡುತ್ತಾರೆ.
ದ.ಕ.ಜಿಲ್ಲೆ ಮತೀಯ ಸೂಕ್ಷ್ಮ ಜಿಲ್ಲೆ. ಕೆಲವೊಂದು ಸಂದರ್ಭದಲ್ಲಿ ಇಲ್ಲಿ ಅವರವರ ಲಾಭಕ್ಕೆ ಅಡ್ಜಸ್ಟ್‌ಮೆಂಟ್ ರಾಜಕೀಯ ಮಾಡಲಾಗುತ್ತದೆ. ಅದು ಆಗಬಾರದು. ಸರಕಾರ ಕೂಡಾ ಈ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ. ಆದ್ದರಿಂದ ಜಿಲ್ಲೆಯಲ್ಲಿ ಮತೀಯ ಸಾಮರಸ್ಯ ಕೆಡದ ರೀತಿಯಲ್ಲಿ ಕಾಪಾಡಬೇಕಿದೆ ಎಂದು ರಮಾನಾಥ ರೈ ಹೇಳಿದರು.
You must be logged in to post a comment Login