KARNATAKA
ಪೇಂಟ್ ಮಿಕ್ಸರ್ ಗೆ ಸಿಲುಕಿದ ಮಹಿಳೆ ಜಡೆ – ಕತ್ತರಿಸಿ ಹೋದ ಮಹಿಳೆಯ ತಲೆ
ಬೆಂಗಳೂರು ನವೆಂಬರ್ 09 : ಪೇಂಟ್ಸ್ ಕಾರ್ಖಾನೆಯಲ್ಲಿ ಬಣ್ಣ ಬೆರೆಸುವ ವೇಳೆ ಪೇಂಟ್ ಮಿಕ್ಸರ್ಗೆ ಸಿಲುಕಿ ಮಹಿಳೆ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ನೆಲಗದರನಹಳ್ಳಿಯಲ್ಲಿರುವ ಶ್ರೀಪೇಂಟ್ಸ್ ಕಾರ್ಖಾನೆಯಲ್ಲಿ ನಡೆದಿದೆ.
ಮೃತರನ್ನು 33 ವರ್ಷದ ಶ್ವೇತಾ ಎಂದು ಗುರುತಿಸಲಾಗಿದೆ. ಮಲ್ಲತ್ತಹಳ್ಳಿಯಲ್ಲಿ ವಾಸವಿದ್ದ ಶ್ವೇತಾ, ಬೆಂಗಳೂರಿನ ನೆಲಗದರನಹಳ್ಳಿಯಲ್ಲಿರುವ ಶ್ರೀಪೇಂಟ್ಸ್ ಕಾರ್ಖಾನೆ ಕೆಲಸ ಮಾಡುತ್ತಿದ್ದರು. ಆದ್ರೆ, ನಿನ್ನೆ ಬಣ್ಣ ಬೆರೆಸುವ ಗ್ರೈಂಡರ್ನಲ್ಲಿ ಜಡೆ ಸಿಲುಕಿದ ಪರಿಣಾಮ ಶ್ವೇತಾ ತಲೆ ಕತ್ತರಿಸಿ ಹೋಗಿದೆ. ಇದರಿಂದ ಮಹಿಳೆ ಸಾವನ್ನಪ್ಪಿದ್ದಾಳೆ.
ಬಣ್ಣ ಗಟ್ಟಿಯಾಗುತ್ತಿದ್ದರಿಂದ ಚೆಕ್ ಮಾಡಲು ಗ್ರೈಂಡರ್ ಒಳಗೆ ಬಗ್ಗಿದಾಗ ಮಹಿಳೆಯ ಜಡೆ ಸಿಲುಕಿದೆ. ಜಡೆ ಸಿಲುಕಿದಾಗ ಮಹಿಳೆ ಕೂಗಿಕೊಂಡರೂ ಸಹ ಗ್ರೈಂಡರ್ ಸೌಂಡ್ ಗೆ ಯಾರಿಗೂ ಕೇಳಿಸಿಲ್ಲ. ಮಹಿಳೆ ಗ್ರೈಂಡರ್ಗೆ ಸಿಲುಕಿ ಮೃತಪಟ್ಟ ಬಳಿಕ ಉಳಿದ ಕೆಲಸಗಾರರು ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಗ್ರೈಂಡರ್ ಸ್ಪೀಡ್ಗೆ ಮಹಿಳೆಯ ತಲೆಯೇ ಕತ್ತರಿಸಿ ಹೋಗಿದೆ. ಈ ಬಗ್ಗೆ ಪ್ರಕರಣ ಸಂಬಂಧ ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login