Connect with us

    LATEST NEWS

    ಉಜ್ಜಯಿನಿಯಲ್ಲಿ ಹಾಡುಹಗಲೇ ಮಹಿಳೆಯ ಮೇಲೆ ಅ*ತ್ಯಾ*ಚಾರ – ವಿಡಿಯೋ ಶೂಟ್ ಮಾಡಿ ವೈರಲ್ ಮಾಡಿದ ಸಾರ್ವಜನಿಕರು

    ಉಜ್ಜಯಿನಿ ಸೆಪ್ಟೆಂಬರ್ 06: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಜನನಿಬಿಡ ರಸ್ತೆಯಲ್ಲಿ ಮಹಿಳೆಯೊಬ್ಬರು ಅತ್ಯಾಚಾರವೆಸಗಿ ಘಟನೆ ನಡೆದಿದ್ದು, ಸಾರ್ವಜನಿಕರು ಘಟನೆಯ ವಿಡಿಯೋ ಶೂಟ್ ಮಾಡಿ ವೈರಲ್ ಮಾಡಿದ್ದಾರೆ.

    ನಗರದ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಕೊಯ್ಲಾ ಫಾಟಕ್ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದೆ. ಸದ್ಯ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
    ಪೊಲೀಸರ ಮಾಹಿತಿ ಪ್ರಕಾರ ಸಂತ್ರಸ್ತೆ ರಸ್ತೆ ಬದಿಯ ಚಿಂದಿ ಆಯುವ ಕೆಲಸ ಮಾಡುತ್ತಿದ್ದು, ಆರೋಪಿ ಲೊಕೇಶ್ ಸಂತ್ರಸ್ಥೆಯ ಪರಿಚಯ ಮಾಡಿಕೊಂಡಿದ್ದ, ಬಳಿಕ ಆಕೆಗೆ ಮದ್ಯ ಕುಡಿಸಿ ಆಕೆಯನ್ನು ರಸ್ತೆ ಮಧ್ಯೆ ಇರುವ ಜಾಗವೊಂದರಲ್ಲಿ ಅತ್ಯಾಚಾರ ಮಾಡಿದ್ದಾನೆ. ಇದನ್ನು ಸಾರ್ವಜನಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.
    ಸದ್ಯ ಪೊಲೀಸರು ವಿಡಿಯೋ ಆಧಾರದಲ್ಲಿ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.

    ಈ ಘಟನೆ ಮಧ್ಯಪ್ರದೇಶದಲ್ಲಿ ಇದೀಗ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆಡಳಿತಾರೂಢ ಬಿಜೆಪಿ ವಿರುದ್ಧ ಆರೋಪಿಸಿದೆ.

     

     

    Share Information
    Advertisement
    Click to comment

    You must be logged in to post a comment Login

    Leave a Reply