DAKSHINA KANNADA
ಅರುಣ್ ಪುತ್ತಿಲ ಇಲ್ಲದಿದ್ದರೆ ಕಾರ್ಯಕರ್ತರನ್ನ ಜೀವಂತ ನೋಡುತ್ತಿರಲಿಲ್ಲ: ದಿ. ಹರ್ಷ ಸಹೋದರಿ ಅಶ್ವಿನಿ

ಪುತ್ತೂರು, ಮೇ 22: ಪುತ್ತೂರಿನಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರಿಂದ ದೌರ್ಜನ್ಯಕ್ಕೊಳಗಾದ ಹಿಂದೂ ಕಾರ್ಯಕರ್ತರನ್ನು ಶಿವಮೊಗ್ಗದ ದಿ. ಹರ್ಷ ಸಹೋದರಿ ಅಶ್ವಿನಿ ಬೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿಂದೂ ಕಾರ್ಯಕರ್ತರನ್ನು ಭೇಟಿಯಾದ ಬಳಿಕ ದಿ.ಹರ್ಷ ಸಹೋದರಿ ಅಶ್ವಿನಿ ಮಾಧ್ಯಮದ ಜೊತೆ ಮಾತನಾಡಿದ್ದಾರೆ. ಕಾರ್ಯಕರ್ತರ ಸ್ಥಿತಿಯನ್ನ ನೋಡಿ ತುಂಬಾ ಬೇಸರಗೊಂಡಿದ್ದೇನೆ, ಇವತ್ತು ಅರುಣ್ ಪುತ್ತಿಲ ಇಲ್ಲದಿದ್ದರೆ ಕಾರ್ಯಕರ್ತರನ್ನ ಜೀವಂತ ನೋಡುತ್ತಿರಲಿಲ್ಲ.

ಕಾರ್ಯಕರ್ತರು ಹಿಂದೂ ಸಮಾಜ ಗಟ್ಟಗೊಳಿಸಲು ಹೋರಾಡ್ತಾ ಇದ್ದಾರೆ, ಪ್ರತಿಯೊಬ್ಬರೂ ಕೂಡ ಅರ್ಥ ಮಾಡಿಕೊಳ್ಳಬೇಕು. ಹಿಂದೂ ಕಾರ್ಯಕರ್ತರು ಸಮಾಜಕ್ಕೆ ದ್ರೋಹ ಮಾಡ್ತಾ ಇಲ್ಲ, ಹಿಂದೂ ಕಾರ್ಯಕರ್ತರು ಯಾವತ್ತೂ ಕುಗ್ಗಲ್ಲ, ಈ ರೀತಿ ದೌರ್ಜನ್ಯ ಮಾಡ್ತಾ ಇದ್ರೆ ಹಿಂದೂ ಕಾರ್ಯಕರ್ತರು ಬೆಳಿತಾರೆ ಹೊರತು ಕುಗ್ಗಲ್ಲ, ಅರುಣ್ ಕುಮಾರ್ ಪುತ್ತಿಲ ಇರೋವರೆಗೂ ಯಾವ ಕಾರ್ಯಕರ್ತನಿಗೂ ತೊಂದರೆ ಆಗಲ್ಲ.
ಪ್ರತಿಯೊಬ್ಬರಿಗೂ ಒಂದು ಜೀವ ಅಮೂಲ್ಯವಾದದ್ದು, ಹಾಗಾಗಿ ದಯವಿಟ್ಟು ಈ ರೀತಿಯ ದೌರ್ಜನ್ಯ ಮಾಡೋದು ಸರಿಯಲ್ಲ, ರಾಜ್ಯದಲ್ಲಿ ಸುಮಾರು 36 ರಷ್ಟು ಕಾರ್ಯಕರ್ತರು ಬಲಿಯಾಗಿದ್ದಾರೆ. ಈ ರೀತಿ ಒಬ್ಬ ಹೋದ್ರೆ ಸಾವಿರಾರು ಜನ ಹುಟ್ಟಿ ಬರ್ತಿವಿ, ಹಿಂದುತ್ವವನ್ನ ಬೆಳೆಸಿಕೊಳ್ಳುತ್ತೇವೆ ಹಿಂದುತ್ವದ ಮೂಲಕ ಸಮಾಜವನ್ನ ಗಟ್ಟಿಗೊಳಿಸುತ್ತೇವೆ.
ಪುತ್ತೂರಿನಲ್ಲಿ ಆದಂತಹ ದೌರ್ಜನ್ಯ ಎಲ್ಲಿಯೂ ನಡೆದಿಲ್ಲ. ಮಾಡಿದವ್ರಿಗೂ ಮಕ್ಕಳು ಇರ್ತಾರೆ, ಮಾಡಿಸಲು ಕುಮ್ಮಕ್ಕು ಕೊಟ್ಟವ್ರಿಗೂ ಮಕ್ಕಳು ಇದ್ದಾರೆ. ಪ್ರತಿಯೊಬ್ಬರಿಗೂ ನೋವಾಗುತ್ತೆ, ಇನ್ನು ಮುಂದೆ ಯಾದ್ರು ಅರ್ಥಮಾಡಿಕೊಂಡು ಬಾಳಿ ಸಮಾಜಕ್ಕೆ ಮಾದರಿಯಾಗಿರಿ. ಕೇಸರಿ ಶಾಲು ಹಾಕಿದ ಕೂಡಲೇ ಹಿಂದುತ್ವ ಆಗಲ್ಲ, ಅದನ್ನ ಬುದ್ಧಿಯಲ್ಲಿಟ್ಟುಕೊಂಡು ಗಮನದಲ್ಲಿಟ್ಟುಕೊಂಡು ಹಿಂದುತ್ವಕ್ಕೆ ಕೆಲಸ ಮಾಡಿ ಎಂದು ದಿ. ಹರ್ಷ ಸಹೋದರಿ ಅಶ್ವಿನಿ ಹೇಳಿದ್ದಾರೆ.