Connect with us

    FILM

    ದಿ ಕೇರಳ ಸ್ಟೋರಿ: ಮುಸ್ಲಿಂ ಹುಡುಗಿಯ ಪಾತ್ರ ಮಾಡಿದ್ದ ನಟಿಗೆ ಕೊಲೆ ಬೆದರಿಕೆ

    ಕಳೆದ ಎರಡು ವಾರಗಳಿಂದ ದೇಶಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ ಮುಸ್ಲಿಂ ಹುಡುಗಿಯಾಗಿ ನಟಿಸಿದ್ದ ನಟಿ ಸೋನಿಯಾ ಬಾಲಾನಿಗೆ ಕೊಲೆ ಬೆದರಿಕೆ  ಹಾಕಿದ್ದಾರೆ ಎನ್ನವ ಮಾಹಿತಿ ಸಿಕ್ಕಿದೆ. ಈ ಹಿಂದೆ ಚಿತ್ರದ ನಾಯಕಿ ಅದಾ ಶರ್ಮಾಗೂ ಕೊಲೆ ಬೆದರಿಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಪೊಲೀಸ್ ಭದ್ರತೆಯನ್ನೂ ನೀಡಲಾಗಿತ್ತು.

    ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಸೋನಿಯಾ ಮುಸ್ಲಿಂ ಹುಡುಗಿಯಾಗಿ, ಹಿಂದೂ ಹುಡುಗಿಯರನ್ನು ಮತಾಂತರ ಮಾಡುವ ಪ್ರಕ್ರಿಯೆಯಲ್ಲಿ ಸಹಾಯ ಮಾಡುತ್ತಾರೆ. ನಟಿಯಾಗಿ ಅವರು ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಪಾತ್ರ ಹಲವರ ಕೋಪಕ್ಕೆ ಕಾರಣವಾಗಿದೆ. ಹಾಗಾಗಿ ಕೊಲೆ ಬೆದರಿಕೆಯ ಸಂದೇಶಗಳು ಸೋನಿಯಾಗೆ ಬಂದಿವೆಯಂತೆ. ಹಾಗಾಗಿ ಆ ನಟಿಗೂ ಭದ್ರತೆಯನ್ನು ಒದಗಿಸಬೇಕು ಎಂದು ಚಿತ್ರತಂಡ ಮನವಿ ಮಾಡಿಕೊಂಡಿದೆ.ನಟಿಯರಿಗೆ ಒಂದು ಕಡೆ ಜೀವ ಬೆದರಿಕೆ ಮಸೇಜ್ ಗಳು ಬರುತ್ತಿದ್ದರೆ, ಮತ್ತೊಂದು ಕಡೆ ಬಾಕ್ಸ್ ಆಫೀಸಿನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ ಈ ಸಿನಿಮಾ. ವಿವಾದ, ನಿಷೇಧದ ನಡುವೆಯೂ ಇಂದು ಅದು 200 ಕೋಟಿ ರೂಪಾಯಿ ಕ್ಲಬ್ ಸೇರಲಿದೆ. ಶನಿವಾರಕ್ಕೆ 183 ಕೋಟಿ ರೂಪಾಯಿಗೂ ಅಧಿಕ ಬಾಕ್ಸ್ ಆಫೀಸ್ ಬಾಚಿದೆ. ಇನ್ನೂ ಸಾಕಷ್ಟು ಕಡೆ ತುಂಬಿದ ಪ್ರದರ್ಶನವನ್ನು ಚಿತ್ರ ಕಾಣುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply