Connect with us

    DAKSHINA KANNADA

    ಆರಂಭವಾಗಿದೆ ಚಳಿಗಾಲ,ಇರಲಿ ಹೃದಯಾಘಾತದ ಬಗ್ಗೆ ಕಟ್ಟೆಚ್ಚರ..!!

    ಚಳಿಗಾಲ ಆರಂಭವಾಗಿದ್ದು ಕೊರೆಯುವ ಚಳಿಯಿಂದ ಮೈಯೆಲ್ಲಾ ಸೂಚಿ ಚುಚ್ಚಿದ ಅನುಭವವಾಗುತ್ತೆ ಮತ್ತು ಹಿತ ಅನುಭವವನ್ನು ನೀಡುತ್ತೆ. ಆದ್ರೆ ಚಳಿಗಾಲದಲ್ಲಿ ಹೃದಯಾಘಾತಗಳು ಹೆಚ್ಚು ಸಂಭವಿಸುತ್ತಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

    ಕಾರಣ ತಂಪಾದ ಹವಾಮಾನದಿಂದ ಅಪಧಮನಿಗಳು ಕುಗ್ಗುತ್ತವೆ  ಮತ್ತು ರಕ್ತದೊತ್ತಡ ಹೆಚ್ಚಾಗುತ್ತದೆ ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ ಎನ್ನಲಾಗಿದೆ. ಇದಲ್ಲದೇ ಚಳಿಗಾಲದಲ್ಲಿ ವಾಯುಮಾಲಿನ್ಯ ಹೆಚ್ಚಾಗಿರುತ್ತದೆ, ಇದರಿಂದ ಮಾಲಿನ್ಯದ ಕಣಗಳು ಉಸಿರಾಟದ ಮೂಲಕ ಶ್ವಾಸಕೋಶವನ್ನು ಪ್ರವೇಶಿಸುತ್ತವೆ ಮತ್ತು ರಕ್ತದಲ್ಲಿ ಸಂಗ್ರಹವಾಗುತ್ತವೆ ಮತ್ತು ರಕ್ತನಾಳಗಳಲ್ಲಿ ಅಡಚಣೆಯನ್ನು ಉಂಟುಮಾಡುತ್ತವೆ. ಈ ಕಾರಣಗಳಿಂದ ಹೃದಯಾಘಾತದ ಅಪಾಯವು ಹೆಚ್ಚಾಗುತ್ತದೆ.ಚಳಿಗಾಲದಲ್ಲಿ ಸಾಕಷ್ಟು ಚಳಿ ಇರುವುದರಿಂದ ಬೆಳಗ್ಗೆ ಬೇಗ ಎದ್ದು ಯೋಗ ವ್ಯಾಯಾಮ, ವಾಕಿಂಗ್​ ಮಾಡುವವರು ಸಂಖ್ಯೆ ತೀರಾ ಕಡಿಮೆ ಎಂದು ತಜ್ಞರು ಹೇಳುತ್ತಾರೆ. ಅಲ್ಲದೆ, ಚಳಿಗಾಲದಲ್ಲಿ ಜನರು ಹೆಚ್ಚು ಕರಿದ ಆಹಾರ ಮತ್ತು ಹೆಚ್ಚಿನ ಕ್ಯಾಲೋರಿ ಆಹಾರವನ್ನು ತಿನ್ನುತ್ತಾರೆ. ಇದಲ್ಲದೆ, ಸೂರ್ಯನ ಬೆಳಕಿನ ಕೊರತೆಯಿಂದಾಗಿ, ದೇಹದಲ್ಲಿ ವಿಟಮಿನ್ ಡಿ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಚಳಿಗಾಲದಲ್ಲಿ ಜ್ವರದಂತಹ ಉಸಿರಾಟದ ಸೋಂಕುಗಳು ಹೆಚ್ಚಾಗುತ್ತವೆ, ಇದು ರಕ್ತನಾಳಗಳಲ್ಲಿ ಊತವನ್ನು ಉಂಟುಮಾಡುತ್ತದೆ. ಇದರಿಂದ ಹೃದಯಾಘಾತದ ಅಪಾಯ ಹೆಚ್ಚು. ಮಿತವಾದ ಕಡಿಮೆ ಕೊಬ್ಬಿನ ಆಹಾರ ಸೇವಿಸಿ, ಉಸಿರಾಟ ಸಮಸ್ಯೆ, ಕಫ ಸಮಸ್ಯೆ ಇರುವವರು ಚಳಿಗಾಳಿಗೆ ಮೈ ಒಡ್ಡದಿರಿ. ಪ್ರತಿದಿನ 30 ರಿಂದ 45 ನಿಮಿಷಗಳ ಕಾಲ ವ್ಯಾಯಾಮ ಮಾಡಿ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಿ ಆಗ ಹೃದಯವು ಆರೋಗ್ಯಯುತವಾಗಿರುತ್ತದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *