UDUPI
ಒಂದು ತಿಂಗಳಲ್ಲಿ ಉಡುಪಿ ಗ್ರೀನ್ ಝೋನ್ ಗೆ ಬರಲಿದೆ
– ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್
ಉಡುಪಿ ಜೂನ್ 3: ಉಡುಪಿಯಲ್ಲಿ ಕೊರೊನಾ ಸೊಂಕು ಹೆಚ್ಚಾಗುತ್ತಿದ್ದರೂ ಇನ್ನು ಒಂದು ತಿಂಗಳಲ್ಲಿ ಉಡುಪಿ ಜಿಲ್ಲೆಯನ್ನು ಗ್ರೀನ್ ಝೋನ್ ಆಗಿ ಪರಿವರ್ತನೆ ಮಾಡುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕೊರೊನಾ ಪ್ರಕರಣಗಳಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲೇ 18 ನೇ ಸ್ಥಾನದಲ್ಲಿತ್ತು. ಈಗ ಕೊರೊನಾ ಸೊಂಕಿನಲ್ಲಿ ಉಡುಪಿ ಮೊದಲ ಸ್ಥಾನಕ್ಕೆ ಬಂದಿದೆ. ಜಿಲ್ಲೆಯಲ್ಲಿ ಈವರೆಗೆ 64 ಜನ ಗುಣಮುಖ ಆಗಿದ್ದಾರೆ. ಉಡುಪಿ ಜಿಲ್ಲೆಯೊಂದರಲ್ಲೇ 9022 ಕೊರೊನಾ ಪರೀಕ್ಷೆ ನಡೆದಿದೆ ಎಂದು ತಿಳಿಸಿದರು.
ವಾರದೊಳಗೆ ಉಡುಪಿಯಲ್ಲಿ ಕೊರೊನಾ ಪರೀಕ್ಷಾ ಲ್ಯಾಬ್ ನ್ನು ಜಿಲ್ಲಾಸ್ಪತ್ರೆಯಲ್ಲಿ ಆರಂಭಿಸಲಾಗುವುದು. ಇದರಿಂದ ದಿನಕ್ಕೆ 1200 ಮಂದಿಯ ತಪಾಸಣೆಗೆ ಅವಕಾಶ ಆಗಲಿದೆ ಎಂದರು.
ನಿರಂತರ ಮಾಸ್ಕ್ ಹಾಕಿದ್ರೆ ಅಪಾಯ ಇಲ್ಲ, ಆದರೆ ಎನ್ 95 ಹಾಕಿದ್ರೆ ಸ್ವಲ್ಪ ಮಟ್ಟಿನ ಉಸಿರಾಟದ ಸಮಸ್ಯೆ ಆಗುತ್ತದೆ. ಹಾಗಾಗಿ ಮಾಮೂಲಿ ಮಾಸ್ಕ್ ಧರಿಸಿದರೆ ಯಾವುದೇ ಅಪಾಯ ಇಲ್ಲ ಎಂದು ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.