Connect with us

UDUPI

ಉಡುಪಿಯಲ್ಲಿ ಇಂದು ಮತ್ತೆ 62 ಮಂದಿಗೆ ಕೊರೊನಾ ಸೊಂಕು

– 471ಕ್ಕೆ ಏರಿಕೆಯಾದ ಒಟ್ಟು ಸೊಂಕಿತರ ಸಂಖ್ಯೆ

ಉಡುಪಿ ಜೂನ್ 3: ಉಡುಪಿ ಜಿಲ್ಲೆಯಲ್ಲಿ ಇಂದು ಮತ್ತೆ 62 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಇದರೊಂದಿಗೆ ಉಡುಪಿಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ 472 ಕ್ಕೆ ಏರಿಕೆಯಾದಂತಾಗಿದೆ.
ಇಂದು ಕೂಡ ದೃಢಪಟ್ಟ ಪ್ರಕರಣಗಳಲ್ಲಿ ಬಹುಪಾಲು ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್ ನಲ್ಲಿರುವವರು.

ಹೊರ ರಾಜ್ಯ, ಹೊರ ದೇಶದಿಂದ ಬಂದು ಗಂಟಲ ಮಾದರಿ ಕೊಟ್ಟು ಹೋಮ್ ಕ್ವಾರಂಟೈನ್ ಆಗಿರುವ 4936 ವೈದ್ಯಕೀಯ ವರದಿಗಳು ಬರೋದು ಬಾಕಿಯಿದೆ. ವೈದ್ಯಕೀಯ ವರದಿ ಬರುತ್ತಿದ್ದಂತೆ ಎಲ್ಲರನ್ನು ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗುತ್ತಿದೆ. ಜಿಲ್ಲೆಯ 96 ಕಡೆ ಕಂಟೈನ್ಮೆಂಟ್ ಜೋನ್ ಮಾಡಲಾಗಿದ್ದು, ಮನೆಗಳನ್ನು ಸೀಲ್ ಮಾಡಲಾಗಿದೆ. ಸೋಂಕಿತರ ಪೈಕಿ ಜಿಲ್ಲೆಯಲ್ಲಿ ಈವರೆಗೆ 84 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯ ಸಕ್ರೀಯ ಸೋಂಕಿತರ ಸಂಖ್ಯೆ 386 ಆಗಿದ್ದು ಚಿಕಿತ್ಸೆ ಕೊಡಲಾಗುತ್ತಿದೆ.