KARNATAKA
ಇಂದು ರಾತ್ರಿ 8 ಗಂಟೆಯಿಂದ ಬಾರ್ ಬಂದ್ – ಪಾರ್ಸೆಲ್‍ಗೂ ನೋ ಪರ್ಮಿಷನ್
ಬೆಂಗಳೂರು:ವಿಕೇಂಡ್ ಲಾಕ್ ಡೌನ್ ಸಂದರ್ಭ ಮದ್ಯಪ್ರಿಯರಿಗೆ ಶಾಕಿಂಗ್ ನ್ಯೂಸ್ ಒಂದು ಹೊರಬಿದ್ದಿದ್ದು, ಬಾರ್ ಗಳಲ್ಲಿ ಪಾರ್ಸೆಲ್ ಗೆ ಇದ್ದ ಅವಕಾಶವನ್ನು ಸರಕಾರ ವಾಪಾಸ್ ತೆಗೆದುಕೊಂಡಿದ್ದು. ಇಂದು ರಾತ್ರಿಯಿಂದಲೇ ಮದ್ಯ ಮಾರಾಟ ಬಂದ್ ಆಗಲಿದೆ.
ರಾತ್ರಿ 8 ಗಂಟೆಯ ನಂತರ ಮದ್ಯ ಸಿಗಲ್ಲ. ವೀಕೆಂಡ್ ಕರ್ಫ್ಯೂನಲ್ಲಿ ಮದ್ಯ ಪಾರ್ಸೆಲ್‍ಗೂ ಅನುಮತಿ ಇಲ್ಲ. ಕದ್ದು ಮುಚ್ಚಿ ಮಾರಾಟ ಮಾಡುವ ಬಾರ್ ಗಳಿಗೆ ಕಡಿವಾಣ ಹಾಕಲು ಅಬಕಾರಿ ಇಲಾಖೆ ಸಜ್ಜಾಗಿದೆ. ಕಣ್ತತಪ್ಪಿಸಿ ಮದ್ಯಮಾರಾಟ ಮಾಡಿ ಸಿಕ್ಕಿಬಿದ್ದರೆ ಬಾರ್ ಲೆಸೆನ್ಸ್ ರದ್ದು ಮಾಡಲಾಗುತ್ತದೆ.
ಸೋಮವಾರ ಮುಂಜಾನೆವರೆಗೂ ಬಾರ್, ರೆಸ್ಟೋರೆಂಟ್, ಎಂಎಸ್ ಐಎಲ್ ಎಲ್ಲಾವೂ ಬಂದ್ ಆಗಿರುತ್ತವೆ. ಸೋಮವಾರದ ಬಳಿಕ ಬಾರ್ ಪಬ್, ರೆಸ್ಟೋರೆಂಟ್‍ಗಳಲ್ಲಿ ಸಿಟ್ಟಿಂಗ್ ಕೆಪಾಸಿಟಿ ಮೈಂಟೇನ್ ಮಾಡಬೇಕು. ಜೊತೆಗೆ ಬಾರ್, ಪಬ್ ಸಿಬ್ಬಂದಿಗೆ ಕಡ್ಡಾಯವಾಗಿ ಎರಡು ಡೋಸ್ ವ್ಯಾಕ್ಸಿನ್ ಕಡ್ಡಾಯವಾಗಿರುತ್ತದೆ.
ಇನ್ನು ಬಾರ್, ಪಬ್, ರೆಸ್ಟೋರೆಂಟ್‍ಗೆ ಬರುವ ಗ್ರಾಹಕರಿಗೂ ಕೋವಿಡ್ ರೂಲ್ಸ್ ಪಾಲನೆ ಮಾಡುವಂತೆ ನೋಡಿಕೊಳ್ಳಬೇಕು. ಕೋವಿಡ್ ನಿಯಮ ಉಲ್ಲಂಘನೆ ಮಾಡಿದ್ದು ಕಂಡು ಬಂದ್ರೆ ಲೆಸನ್ಸ್ ರದ್ದು ಮಾಡುವ ಕಟ್ಟು ನಿಟ್ಟಿನ ಎಚ್ಚರಿಕೆ ನೀಡಲಾಗಿದೆ