LATEST NEWS
ಬಿಜೆಪಿ ನಾಯಕರ ವಿರುದ್ದ ಮಾನನಷ್ಟ ಮೊಕದ್ದಮೆ – ಪ್ರತಿಭಾ ಕುಳಾಯಿ

ಬಿಜೆಪಿ ನಾಯಕರ ವಿರುದ್ದ ಮಾನನಷ್ಟ ಮೊಕದ್ದಮೆ – ಪ್ರತಿಭಾ ಕುಳಾಯಿ
ಮಂಗಳೂರು ಎಪ್ರಿಲ್ 4:ಬಿಜೆಪಿ ಇತ್ತೀಚೆಗೆ ಬಿಡುಗಡೆ ಮಾಡಿದ ಕಾಂಗ್ರೇಸ್ ವಿರುದ್ದ ಚಾರ್ಜ್ ಶೀಟ್ ನಲ್ಲಿದ್ದ ಬೆಂಗಳೂರಿನಲ್ಲಿ ಸೀರೆ ಎಳೆದ ಪ್ರಕರಣದಲ್ಲಿ ನನ್ನ ಪೊಟೋ ಬಳಕೆ ಮಾಡಿರುವುದರ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಮಹಿಳಾ ಕಾಂಗ್ರೇಸ್ ಮುಖಂಡೆ ಪ್ರತಿಭಾ ಕುಳಾಯಿ ತಿಳಿಸಿದ್ದಾರೆ.
ಇಂದು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ರವಿವಾರ ಬಿಡುಗಡೆ ಮಾಡಿದ ಕಾಂಗ್ರೇಸ್ ಪಕ್ಷದ ವಿರುದ್ದ ಚಾರ್ಜ್ ಶೀಟ್ ನಲ್ಲಿ ಬಿಬಿಎಂಪಿ ಕಾರ್ಯಕ್ರಮದಲ್ಲಿ ಜೆಡಿಎಸ್ ಪಾಲಿಕೆ ಸದಸ್ಯೆ ಮಂಜುಳಾ ನಾರಾಯಣ ಸ್ವಾಮಿ ಸೀರೆ ಎಳೆದಾಡಿದ ಪ್ರಕರಣದ ಬಗ್ಗೆ ಹೇಳಿಕೆ ಪ್ರಕಟಿಸಲಾಗಿತ್ತು. ಈ ಹೇಳಿಕೆ ಪ್ರಕಟಿಸುವಾಗ ಹೇಳಿಕೆಗೆ ನನ್ನ ಹೆಸರು ಮತ್ತು ಭಾವಚಿತ್ರ ಬಳಸಿದ್ದಾರೆ ಎಂದು ಆರೋಪಿಸಿದ್ದಾರೆ. ನನ್ನ ಭಾವಚಿತ್ರ ಮತ್ತು ಹೆಸರು ಬಳಸಿ ನನಗೆ ಮಾನಸಿಕ ಹಿಂಸೆ ಮತ್ತು ಮಾನಹಾನಿ ಮಾಡಿದ್ದಾರೆಂದು ಪ್ರತಿಭಾ ಕುಳಾಯಿ ಆರೋಪಿಸಿದ್ದಾರೆ.

ಕಾಂಗ್ರೇಸ್ ಪಕ್ಷದ ಚಾರ್ಜ್ ಶೀಟ್ ನಲ್ಲಿ ನನಗೆ ಸಂಬಂಧಪಡದ ವಿಷಯದಲ್ಲಿ ನನ್ನ ಭಾವಚಿತ್ರ ಬಳಿಸಿರುವುದರ ವಿರುದ್ದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರ ವಿರುದ್ದ ಇಂದು ಮಾನನಷ್ಟ ಮೊಕದ್ದಮೆ ಹೂಡಲಿದ್ದೇನೆ ಎಂದು ತಿಳಿಸಿದರು.
ಬಿಜೆಪಿಯಂತಹ ರಾಷ್ಟ್ರೀಯ ಪಕ್ಷಕ್ಕೆ ಜಾರ್ಜ್ ಶೀಟ್ ನಂತಹ ಸಣ್ಣ ಪುಸ್ತಕವನ್ನು ನಿಭಾಯಿಸಲು ವಿಫಲವಾಗಿದ್ದು. ಇಂತಹ ಬಿಜೆಪಿ ಗೆ ಕರ್ನಾಟಕದ ಜನತೆ ಮತ ನೀಡಬಾರದು ಎಂದು ವಿನಂತಿಸುವೆ ಎಂದು ಹೇಳಿದರು.