DAKSHINA KANNADA
ಪುತ್ತೂರು ತಾಲೂಕಿನ ಕೃಷಿತೋಟಗಳಿಗೆ ದಾಳಿಯಿಟ್ಟ ಕಾಡಾನೆ
ಪುತ್ತೂರು, ಡಿಸೆಂಬರ್ 16: ಪುತ್ತೂರು ತಾಲೂಕಿನ ಕೃಷಿತೋಟಗಳಿಗೆ ಕಾಡಾನೆ ದಾಳಿಯಿಟ್ಟು, ತೋಟದಲ್ಲಿ ಬೆಳೆದ ಅಡಿಕೆ ,ತೆಂಗು, ಬಾಳೆ ಗಿಡಗಳಿಗೆ ಹಾನಿ ಮಾಡಿದ ಘಟನೆ ನಡೆದಿದೆ.
ಪುತ್ತೂರಿನ ಅರಿಯಡ್ಕ ಗ್ರಾಮಪಂಚಾಯತ್ ವ್ಯಾಪ್ತಿಯ ಮಾಡ್ನೂರು, ಚಾಕೋಟೆ,ಪುವಂದೂರು ಗ್ರಾಮದ ಕೃಷಿತೋಟಗಳಿಗೆ ಹಾನಿ ಮಾಡಿದೆ. ಬೆಳೆಯ ಜೊತೆಗೆ ತೋಟಗಳಿಗೆ ಹಾಕಿದ ಪೈಪ್ ಲೈನ್ ಗಳಿಗೂ ಹಾನಿ ಮಾಡಿದ್ದು, ನಿರಂತರ ಕಾಡುಪ್ರಾಣಿಗಳ ಹಾವಳಿಯಿಂದ ಕೃಷಿಕರು ಬೇಸತ್ತು ಹೋಗಿದ್ದಾರೆ.
ಅಷ್ಟೇ ಅಲ್ಲದೇ ಮಕ್ಕಳಿಗೆ ಶಾಲಾ-ಕಾಲೇಜುಗಳಿಗೆ ಹೋಗಲೂ ಭಯದ ವಾತಾವರಣ ಎದುರಾಗಿದೆ. ಬೆಳೆ ಹಾನಿಗೀಡಾದ ತೋಟಗಳಿಗೆ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿದ್ದು, ಆನೆಗಳ ಉಪಟಲದ ಬಗ್ಗೆ ಮಾಜಿ ಶಾಸಕರಿಗೆ ಕೃಷಿಕರು ದೂರು ನೀಡಿದ್ದಾರೆ. ಕೃಷಿಕರಿಗೆ ಸೂಕ್ತ ಪರಿಹಾರ ನೀಡುವಂತೆ ಮಾಜಿ ಶಾಸಕ ಸಂಜೀವ ಮಠಂದೂರು ಸರಕಾರವನ್ನು ಒತ್ತಾಯಿಸಿದ್ದಾರೆ.