ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ ಆನೆಗಳ ಹಿಂಡು

ಸುಳ್ಯ ಎಪ್ರಿಲ್ 7: ಸುಳ್ಯ ನಗರದ ಮಧ್ಯೆಯೇ ಹಿಂಡಾನೆಗಳು ಪ್ರತ್ಯಕ್ಷವಾಗಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಸುಳ್ಯ ನಗರಸಭೆ ವ್ಯಾಪ್ತಿಯ ಭಸ್ಮಠದ ಪಯಸ್ವಿನಿ ನದಿ ದಡದಲ್ಲಿ ಈ ಆನೆಗಳ ಹಿಂಡು ಪತ್ತೆಯಾಗಿದೆ.

ಈ ಆನೆಗಳ ಗುಂಪಿನಲ್ಲಿ ಮರಿಯಾನೆ ಸೇರಿದಂತೆ ಒಟ್ಟು ಎಂಟು ಆನೆಗಳಿದ್ದು, ಈ ಆನೆಗಳು ನದಿ ದಾಟಿ ಬಂದಲ್ಲಿ ನೇರ ಸುಳ್ಯ ನಗರಕ್ಕೇ ಕಾಲಿಡಲಿದ್ದು, ಇದು ಸಾರ್ವಜನಿಕರಲ್ಲಿ ಆತಂಕ ಸೃಷ್ಠಿಸಿದೆ. ಆನೆಗಳ ಹಿಂಡನ್ನು ಓಡಿಸಲು ಅರಣ್ಯ ಇಲಾಖೆ ನಿರಂತರ ಪ್ರಯತ್ನ ನಡೆಸುತ್ತಿದೆ.

VIDEO

 

 

Facebook Comments

comments