ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪೇಟೆಯಲ್ಲಿ ಕಾಣಿಸಿಕೊಂಡ ಕಾಡಾನೆ

ಸುಬ್ರಹ್ಮಣ್ಯ ಫೆಬ್ರವರಿ 20: ಹೆಸರಾಂತ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಪೇಟೆಯಲ್ಲಿ ಕಾಡಾನೆಯೊಂದು ಪ್ರತ್ಯಕ್ಷವಾಗಿದೆ. ಇಂದು ಮುಂಜಾನೆ ಸುಮಾರು 5.30 ರ ವೇಳೆಗೆ ಕಾಡಾನೆ ಪೇಟೆಯ ತುಂಬೆಲ್ಲಾ ಸವಾರಿ ಮಾಡಿದೆ. ಮುಂಜಾನೆ ದೇವರ ದರ್ಶನಕ್ಕೆಂದು ಕ್ಷೇತ್ರದ ಕಡೆ ತೆರಳಿತ್ತಿದ್ದ ಭಕ್ತಾಧಿಗಳಿಗೆ ಈ ಆನೆ ಕಾಶಿಕಟ್ಟೆ ಬಳಿ ಪ್ರತ್ಯಕ್ಷವಾಗಿದೆ.

ಸ್ಥಳೀಯರು ಆನೆಯನ್ನು ತಮ್ಮ ಮೊಬೈಲ್ ಮೂಲಕ ಚಿತ್ರೀಕರಿಸಿದ್ದು, ಆನೆಯ ಬಗ್ಗೆ ಎಚ್ಚರಿಕೆಯಲ್ಲಿರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಕಳುಹಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ವಿಪರೀತ ಕಾಡಾನೆಗಳ ಹಾವಳಿಯಿದ್ದು, ಅರಣ್ಯ ಇಲಾಖೆ ಈ ಬಗ್ಗೆ ಗಮನ ಹರಿಸಬೇಕಿದೆ.