Connect with us

  LATEST NEWS

  ಕಾಡಾನೆ ಮುಂದೆ ರೀಲ್ಸ್ ಮಾಡಲು ಹೋಗಿ ಹತನಾದ ಯುವಕ..!

  ಬಿಜ್ನೋರ್: ಕಾಡಾನೆ ಮುಂದೆ ರೀಲ್ಸ್ ಮಾಡಲು ಹೋಗಿ ಯುವಕನೋರ್ವ ಬಲಿಯಾದ ಘಟನೆ ಉತ್ತರ ಪ್ರದೇಶದ ಬಿಜ್ನೋರ್‌ನ ಧಮ್ಪುರ್ ಪ್ರದೇಶದಲ್ಲಿ ನಡೆದಿದೆ. ಮೃತ ಯುವಕನನ್ನು ಬಾಗ್ದಾದ್ ಅನ್ಸಾರಿ ಗ್ರಾಮದ ನಿವಾಸಿ ಮುಹಮ್ಮದ್ ಮುರ್ಶ್ಲೀನ್ (24) ಎಂದು ಗುರುತಿಸಲಾಗಿದೆ.

  ಬಿಜ್ನೋರ್‌ನ ಧಮ್ಪುರ್ ಅರಣ್ಯ ವಲಯದ ಬಳಿ ಕಾನಿನಿಂದ ಬಂದ ಪುಂಡಾನೆಯೊಂದು ಘೀಳಿಡುತ್ತಾ ಬರುತ್ತಿರುವ ಸದ್ದನ್ನು ಕೇಳಿ ಮುಹಮ್ಮದ್ ಮುರ್ಶ್ಲೀನ್ ತನ್ನ ಗೆಳೆಯರೊಂದಿಗೆ ಮನೆಯಿಂದ ಹೊರಗೆ ಬಂದಿದ್ನುದನು. ಕಾಡಾನೆಯನ್ನು ಕಂಡ ಆತ ಅದರ ರೀಲ್ ಮಾಡಲು ಪ್ರಾರಂಭಿಸಿದನು. ಆತನನನ್ನು ನೋಡಿದ ಕಾಡಾನೆ ಕ್ಷಣ ಮಾತ್ರದಲ್ಲಿ ಆತನತ್ತ ಧಾವಿಸಿ  ದಾಳಿ ನಡೆಸಿ ತನ್ನ ಸೊಂಡಿಲಿನಿಂದ ಆತನನ್ನು ಮೇಲೆತ್ತಿ, ನೆಲಕ್ಕೆ ಬಡಿಯಿತು. ಇದಾದ ನಂತರ ಆತನನ್ನು ಕಾಲಿನಿಂದ ತುಳಿದಿದೆ ಎಂದು ಪ್ರತ್ಯಕ್ಷದರ್ಶಿಗಳ ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಬಿಜ್ನೋರ್ ಉಪ ವಲಯ ಅರಣ್ಯಾಧಿಕಾರಿ ಗ್ಯಾನ್ ಸಿಂಗ್, “ಆನೆಯು ಬಹುಶಃ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಕಲಗಢ್ ಪ್ರದೇಶದಿಂದ ಹೊರ ಬಂದಿರುವಂತಿದೆ. ಜನನಿಬಿಡ ಪ್ರದೇಶದಿಂದ ಸಹುವಾಲಾ ಅರಣ್ಯ ವಲಯಕ್ಕೆ ಆನೆಯನ್ನು ಹಿಮ್ಮೆಟ್ಟಿಸುವ ಪ್ರಯತ್ನಗಳು ಪ್ರಗತಿಯಲ್ಲಿವೆ ಎಂದು  ಮಾಹಿತಿ ನೀಡಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply