DAKSHINA KANNADA
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸಮೀಪ ಕಾಡಾನೆ ಓಡಾಟ
ಕುಕ್ಕೆ ಸುಬ್ರಹ್ಮಣ್ಯ ಡಿಸೆಂಬರ್ 01: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಈ ನಡುವೆ ದೇವಸ್ಥಾನ ಸಮೀಪ ಕಾಡಾನೆಯೊಂದು ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗಿತ್ತು.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜಾತ್ರಾಮಹೋತ್ಸವ ನಡೆಯುತ್ತಿದೆ. ಲಕ್ಷಾಂತರ ಭಕ್ತರು ಜಾತ್ರಾ ಮಹೋತ್ಸವಕ್ಕೆ ಆಗಮಿಸುತ್ತಿದ್ದಾರೆ. ಈ ನಡುವ ಕಾಡಾನೆಯೊಂದು ಕುಕ್ಕೆ ಸುಬ್ರಹ್ಮಣ್ಯ ದ ದೇವಸ್ಥಾನದ ಪಕ್ಕದಲ್ಲೇ ತಿರುಗಾಟ ನಡೆಸಿದೆ. ಸಂಪುಟ ನರಸಿಂಹ ಮಠದ ಬಳಿ ಆನೆ ಓಡಾಡಿದೆ. ಈ ವೇಳೆ ದೇವಸ್ಥಾನದ ಆನೆ ಎಂದು ಭಕ್ತರು ಕಾಡಾನೆ ಮುಟ್ಟಲು ಮುಂದಾಗಿದ್ದು, ಕಂಡು ಬಂದಿದೆ. ಜಾತ್ರೆಯ ಸಂದರ್ಭ ಕಾಡಾನೆ ಬಂದಿದ್ದು ಆತಂಕಕ್ಕೆ ಕಾರಣವಾಗಿದೆ. ದೇವಸ್ಥಾನದಲ್ಲಿ ಜಾತ್ರೆಯ ಬೆಳಕು ಮತ್ತು ಬ್ಯಾಂಡ್ ಸದ್ದಿಗೆ ಕಾಡಾನೆ ದಿಕ್ಕು ಪಾಲಾಗಿ ಓಡಾಡುತ್ತಿದೆ.