Connect with us

  DAKSHINA KANNADA

  ಕುಕ್ಕೆ ಸುಬ್ರಹ್ಮಣ್ಯ ಐನೆಕಿದು ಶಾಲೆ ಬಳಿ ರಸ್ತೆ ದಾಟಿ ಆತಂಕ ಸೃಷ್ಟಿಸಿದ ಒಂಟಿಸಲಗ..!

  ಕಡಬ :  ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಕಡಬ ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಐನೆಕಿದು ಶಾಲೆ ಬಳಿ ಒಂಟಿ ಸಲಗವೊಂದು ರಸ್ತೆ ದಾಟಿ ಆತಂಕ ಸೃಷ್ಟಿಸಿದೆ.

  ಸುಬ್ರಹ್ಮಣ್ಯ-ಹರಿಹರ ಪಲ್ಲತ್ತಡ್ಕ ರಸ್ತೆಯ ಸಮೀಪ ಇರುವ ಈ ಐನೆಕಿದು ಶಾಲಾ ಪ್ರದೇಶವಾಗಿದ್ದು ಐನೆಕಿದು ಕಡೆಯಿಂದ ಕೋಟೆಗೆ ಸಂಪರ್ಕಿಸುವ ರಸ್ತೆಯನ್ನು ಕಾಡಾನೆ ದಾಟಿ ಹೋಗಿದ್ದು ಘಟನೆಯಿಂದ ಸ್ಥಳೀಯ ಜನತೆ ಭಯಭೀತರಾಗಿದ್ದಾರೆ. ಗ್ರಾಮೀಣ ಪ್ರದೇಶವಾಗಿರುವ ಇಲ್ಲಿ ಶಾಲೆ, ಹಾಲು ಹೀಗೆ ಎಲ್ಲದಕ್ಕೂ ಈ ರಸ್ತೆಯಲ್ಲೇ ಅವಲಂಬಿಸಿರುವುದರಿಂದ ಸಹಜವಾಗಿಯೇ ಯಾವ ಸಂದರ್ಭದಲ್ಲೂ ಆನೆ ದಾಳಿ ಮಾಡಬಹುದೆಂಬ ಭೀತಿ ಎದುರಾಗಿದೆ. ಕೆಳದ ವರ್ಷ ಇದೇ ಭಾಗದಲ್ಲಿ ಕಾಡಾನೆ ಇಬ್ಬರನ್ನು ಬಲಿ ಪಡೆದಿದ್ದು ಅರಣ್ಯ ಇಲಾಖೆ ಶೀಘ್ರವೇ ಈ ಬಗ್ಗೆ ಕ್ರಮಕ್ಕೆ ಮುಂದಾಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply