DAKSHINA KANNADA
ಅನಿಲದಲ್ಲಿ ಕಾಡಾನೆ ದಾಳಿ: ಅಪಾರ ಕೃಷಿ ನಾಶ

ಸುಬ್ರಹ್ಮಣ್ಯ, ಫೆಬ್ರವರಿ 12 : ಕಡಬಕ್ಕೆ ಕಾಡಾನೆ ಆಗಮಿಸಿ ವಾಪಾಸು ಹೋದ ಬೆನ್ನಲ್ಲೇ ಇತ್ತ ಗುಂಡ್ಯ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಅನಿಲ ಎಂಬಲ್ಲಿಯೂ ಕಾಡಾನೆ ಕಂಡುಬಂದಿದ್ದು, ಅಪಾರ ಕೃಷಿ ನಾಶಮಾಡಿದ್ದು, ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರಿಗೆ ತೊಂದರೆಯಾಗಿ ಪರಿಣಮಿಸಿದೆ.
ಮಂಗಳವಾರ ರಾತ್ರಿ ವೇಳೆಯಲ್ಲಿ ಸುಬ್ರಹ್ಮಣ್ಯ ಸಮೀಪದ ಅನಿಲ ನಿವಾಸಿಗಳಾದ ಕೇಶವ್, ವೆಂಕಟೇಶ್ ಮೊದಲಾದವರ ತೋಟಕ್ಕೆ ಕಾಡಾನೆ ನುಗ್ಗಿದ ಕಾಡಾನೆಯು ತೋಟದಲ್ಲಿದ್ದ ಬಾಳೆ ಕೃಷಿಯನ್ನು ನಾಶಪಡಿಸಿದೆ. ಆನೆ ಬಂದ ವಿಷಯ ತಿಳಿದ ಸ್ಥಳೀಯರು ಪಟಾಕಿ ಸಿಡಿಸಿ ಆನೆಯನ್ನು ಓಡಿಸಿದರೂ ಆನೆ ಮಾತ್ರ ಈ ಪರಿಸರ ಬಿಟ್ಟು ಹೋಗಿಲ್ಲ. ಆನೆಯು ರಾಜ್ಯ ಹೆದ್ದಾರಿಯತ್ತ ಚಲಿಸಿದ್ದು, ಕೈಕಂಬದಿಂದ ಗುಂಡ್ಯ ಮಾರ್ಗವಾಗಿ ರಾತ್ರಿ ಸಂಚರಿಸುವವರು ಎಚ್ಚರಿಕೆವಹಿಸಬೇಕಿದೆ.

Video :