LATEST NEWS
ನಾಡಿಗೆ ಬಂದು ಕೆರೆಯಲ್ಲಿ ಸಿಲುಕಿ ಮೃತ ಪಟ್ಟ ಅಪರೂಪದ ಕಡವೆ
ನಾಡಿಗೆ ಬಂದು ಕೆರೆಯಲ್ಲಿ ಸಿಲುಕಿ ಮೃತ ಪಟ್ಟ ಅಪರೂಪದ ಕಡವೆ
ಉಡುಪಿ ಡಿಸೆಂಬರ್ 24: ಕಾಡಿನಲ್ಲಿ ಕಾಣಸಿಗುವ ಬಲು ಅಪರೂಪದ ಕಡವೆಯೊಂದು ನಾಡಿಗೆ ಬಂದು ಸಿಲುಕಿ ಹಾಕಿಕೊಂಡ ಮತೃಪಟ್ಟ ಘಟನೆ ಬ್ರಹ್ಮಾವರ ತಾಲೂಕಿನಲ್ಲಿ ನಡೆದಿದೆ.
ಬ್ರಹ್ಮಾವರ ತಾಲೂಕಿನ ಬಾರಕೂರು ಕಚ್ಚೂರು ಗುಂಡಿಕೆರೆಯಲ್ಲಿ ಎಂಬಲ್ಲಿ ಈ ಘಟನೆ ನಡೆದಿದೆ. ಆಕಸ್ಮಿಕವಾಗಿ ಆಹಾರ ಅರಸುತ್ತಾ ಬಂದ ಕಡೆವೆಯೊಂದು ಗುಂಡಿಕೆರೆ ಬಿದ್ದು ಮೇಲೇರಿ ಬರಲಾರದೆ ಜೀವನ್ಮರಣ ಸ್ಥಿತಿಯಲ್ಲಿತ್ತು.
ಗುಂಡಿಕೆರೆ ಸಮೀಪ ನಾಯಿಗಳು ಕೂಗಾಡುತ್ತಿರುವುದು ಗಮನಿಸಿದ ಸ್ಥಳೀಯರು ಕೆರೆ ಪರಿಶೀಲಿಸಿದಾಗ ಕಡೆವೆ ನೀರಿನಲ್ಲಿ ಬಿದ್ದಿರುವುದು ಕಾಣಿಸಿದೆ. ಸ್ಥಳೀಯರಾದ ಮಧುಸೂಧನ ನೇತೃತ್ವದಲ್ಲಿ ಸುಮಾರು 4 ಗಂಟೆ ಕಾರ್ಯಾಚರಣೆ ನಡೆಸಿದ ಬಳಿಕ ಕಡವೆಯನ್ನು ಕೆರೆಯಿಂದ ಮೇಲೆತ್ತಲಾಯಿತು.
ಆದರೆ ತುಂಬಾ ಹೊತ್ತಿನಿಂದ ನೀರಿನಲ್ಲಿ ಮುಳುಗೇಳುತ್ತಾ ನೀರು ಕುಡಿದಿದ್ದ ಕಡವೆಯನ್ನು ಪಶುವೈದ್ಯ ಮಹೇಶ್ ಶೆಟ್ಟಿ ತಪಾಸಣೆ ಮಾಡುವಾಗ ಮೃತಪಟ್ಟಿತ್ತು. ಬಳಿಕ ಅರಣ್ಯ ಇಲಾಖೆಯ ಜೀವನ್ ದಾಸ್ ಶೆಟ್ಟಿ, ಸುರೇಶ್ ಸಮ್ಮುಖದಲ್ಲಿ ಕಡವೆಯ ಪೋಸ್ಟ್ ಮಾರ್ಟಂ ಮಾಡಿ ಹೂಳಲಾಯಿತು.
ಇತ್ತೀಚೆಗೆ ಉಡುಪಿ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಕಾಡು ಪ್ರಾಣಿಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ನಾಡಿಗೆ ಆಗಮಿಸುತ್ತಿದ್ದು, ಉಡುಪಿಯಲ್ಲಿ ಅರಣ್ಯ ಪ್ರದೇಶಗಳು ಕ್ಷೀಣಿಸುತ್ತಿದೆಯೇ ಎಂಬ ಅನುಮಾನ ಮೂಡಿಸಿದೆ.