LATEST NEWS
ನೊಯ್ಡಾ – ಪುಡ್ ಡೆಲಿವರಿ ಮಾಡಿ ಬೆಲೆಬಾಳುವ ಶೂ ಕದ್ದ ಡೆಲಿವರಿ ಬಾಯ್
ನೋಯ್ಡಾ ಸೆಪ್ಟೆಂಬರ್ 18: ಪುಡ್ ಡೆಲಿವರಿಗೆ ಬಂದ ಡೆಲಿವರಿ ಬಾಯ್ ಅಪಾರ್ಟ್ ಮೆಂಟ್ ಹೊರಗೆ ಇಟ್ಟಿದ್ದ ಬೆಲೆ ಬಾಳುವ ಶೂ ಕಳ್ಳತನ ಮಾಡಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸ್ವಿಗ್ಗಿ ಡೆಲಿವರಿ ಬಾಯ್ ಒಬ್ಬ ಗ್ರಾಹಕರಿಗೆ ಫುಡ್ ಪಾರ್ಸೆಲ್ ಕೊಟ್ಟು ಬರುವಾಗ ಅಲ್ಲೇ ಇನ್ನೊಂದು ಮನೆಯ ಮುಂದಿದ್ದ ಒಂದು ಜೋಡಿ ಶೂಗಳನ್ನು ಎಗರಿಸಿಕೊಂಡು ಹೋಗಿದ್ದಾನೆ. ಈ ದೃಶ್ಯ ಮನೆಯ ಮುಂಭಾಗದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದ್ದು, ಅಪಾರ್ಟ್ಮೆಂಟ್ ಒಂದಕ್ಕೆ ಫುಡ್ ಡೆಲಿವರಿ ಮಾಡಲು ಬಂದ ಸ್ವಿಗ್ಗಿ ಡೆಲಿವರಿ ಬಾಯ್ ಯಾರೋ ಮನೆಯ ಹೊರ ಭಾಗದಲ್ಲಿ ಶೂ ರ್ಯಾಕ್ನಲ್ಲಿ ಇಟ್ಟಿದ್ದಂತ ಒಂದು ಜೋಡಿ ಶೂ ಅನ್ನು ಕದ್ದುಕೊಂಡು ಹೋಗಿದ್ದಾನೆ. ಈ ದೃಶ್ಯ ಅಲ್ಲೇ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಬಗ್ಗೆ ಮನೆಯವರು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಇದೀಗ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಕುರಿತ ವಿಡಿಯೋವನ್ನು ಸಚಿನ್ ಗುಪ್ತಾ ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಫ್ಲಾಟ್ನ ಹೊರಗೆ ಇಟ್ಟಿದ್ದ ಶೂಗಳನ್ನು ಕಳ್ಳತನ ಮಾಡಿದ ಡೆಲಿವರಿ ಬಾಯ್” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಫ್ಲಾಟ್ ಒಂದರಲ್ಲಿ ಪಾರ್ಸೆಲ್ ಕೊಟ್ಟು ಬರುವಾಗ ಡೆಲಿವರಿ ಬಾಯ್ ಅಲ್ಲೇ ಮೆಟ್ಟಿಲಿನ ಬದಿಯಲ್ಲಿದ್ದ ಶೂ ರ್ಯಾಕ್ನಿಂದ ಒಂದು ಜೋಡಿ ಶೂವನ್ನು ಕದ್ದು, ಅದನ್ನು ಮೆಲ್ಲಗೆ ತನ್ನ ಬ್ಯಾಗ್ ಒಳಗಿಟ್ಟು ಅಲ್ಲಿಂದ ಎಸ್ಕೇಪ್ ಆಗುವ ದೃಶ್ಯವನ್ನು ಕಾಣಬಹುದು.
You must be logged in to post a comment Login