DAKSHINA KANNADA
ಯಾರು ಹೆಚ್ಚು ದುಡ್ಡು ಕೊಡುತ್ತಾರೆ ಅವರಿಗೆ ಮುಖ್ಯಮಂತ್ರಿ ಸ್ಥಾನ: ಪ್ರತಾಪ್‌ಸಿಂಹ ನಾಯಕ್

ಪುತ್ತೂರು, ಜುಲೈ 14: ರಾಜ್ಯ ಸರಕಾರ ಗ್ಯಾರೆಂಟಿ ಯೋಜನೆಗಳಿಗೆ ಸೋರಿಕೆಯ 40 ಶೇಕಡಾ ಹಣವನ್ನು ಬಳಸುತ್ತೇವೆ ಎಂದಿತ್ತು, ಆದರೆ ಇಂದು ಸರಕಾರದ ಬಳಿ ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲದೆ ಬೆಲೆ ಏರಿಕೆಯಿಂಸ ಜನ ತತ್ತರಿಸಿ ಹೋಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಹೇಳಿದ್ದಾರೆ.
ರಾಜ್ಯದಲ್ಲಿ ಕೆಂಪುಕಲ್ಲು ಮತ್ರು ಮರಳು ಅಭಾವದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಪ್ರತಾಪ್ ಸಿಂಹ ನಾಯಕ್, ಉಳಿಸಿದ 40% ಶೇಕಡಾ ಹಣವನ್ನೂ ಬಳಸುತ್ತಿಲ್ಲ, ನಾವು ಚುನಾವಣೆಯ ಸಂದರ್ಭದಲ್ಲಿ ಒಂದು ಮಾತು ಹೇಳಿದ್ದೆವು. ಕಾಂಗ್ರೇಸ್ ಗೆ ಕರ್ನಾಟಕ ರಾಜ್ಯವೊಂದೇ ದೊಡ್ಡ ಅಧಿಕಾರವಿರುವ ರಾಜ್ಯ, ಇಲ್ಲಿನ ಹಣವನ್ನೇ ಕಾಂಗ್ರೆಸ್ ಇಡೀ ದೇಶದಲ್ಲಿ ಬಳಸುತ್ತಿದೆ.

ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೇವಾಲ ಪ್ರತಿ ಬಾರಿಯೂ ರಾಜ್ಯಕ್ಕೆ ಬರುತ್ತಾರೆ. ರಾಜ್ಯಕ್ಕೆ ಬಂದು ಬ್ಯಾಗ್ ನಲ್ಲಿ ಹಣ ತುಂಬಿ ಹೋಗುತ್ತಾರೆ. ಯಾರು ಹೆಚ್ಚು ದುಡ್ಡು ಕೊಡುತ್ತಾರೆ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗುತ್ತೆ. ಮುಖ್ಯಮಂತ್ರಿಗಳಿಗೆ ಅವರ ಕುರ್ಚಿ ಉಳಿಸಿಕೊಳ್ಳುವ ಅನಿವಾರ್ಯತೆ, ಈ ಕಾರಣಕ್ಕೆ ರಾಜ್ಯದ ಜನರ ಸಮಸ್ಯೆಯನ್ನು ಮುಖ್ಯಮಂತ್ರಿಗಳಿಗೆ ಅನಿವಾರ್ಯತೆಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಹೇಳಿದ್ದಾರೆ.