Connect with us

    BANTWAL

    ಹೈವೋಲ್ಟೇಜ್ ಕ್ಷೇತ್ರ ಬಂಟ್ವಾಳ ಈ ಬಾರಿ ಯಾರಿಗೆ……. ?

    ಹೈವೋಲ್ಟೇಜ್ ಕ್ಷೇತ್ರ ಬಂಟ್ವಾಳ ಈ ಬಾರಿ ಯಾರಿಗೆ……. ?

    ಬಂಟ್ವಾಳ ಮೇ 3: ರಾಜ್ಯದಲ್ಲಿಯೇ ಅತೀ ಕುತೂಹಲ ಮೂಡಿಸಿರುವ ಕ್ಷೇತ್ರ ಬಂಟ್ವಾಳ, 6 ಬಾರಿ ಗೆಲವು ಸಾಧಿಸಿರುವ ರಮಾನಾಥ ರೈ ವಿರುದ್ದ ತೊಡೆತಟ್ಟಿ ನಿಂತಿರುವ ಬಿಜೆಪಿಯ ರಾಜೇಶ್ ನಾಯ್ಕ್ ಈ ಬಾರಿ ರಮಾನಾಥ ರೈ ಎದುರು ಗೆಲುವು ಸಾಧಿಸಲಿದ್ದಾರೆಯೆ ಎನ್ನುವುದು ಸದ್ಯದ ಕುತೂಹಲ.

    ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ ಅತ್ಯಂತ ಕುತೂಹಲ ಕೆರಳಿಸಿರುವ ಕ್ಷೇತ್ರ ಬಂಟ್ವಾಳ, ಬಿಜೆಪಿಯ ಮುಖಂಡರಿಗೆ ಮಾತ್ರವಲ್ಲದೆ ಹಿಂದೂ ಸಂಘಟನೆಯ ಮುಖಂಡರಿಗೂ ಈ ವಿಧಾನಸಭೆ ಕ್ಷೇತ್ರದ ಫಲಿತಾಂಶ ಬಹು ಮುಖ್ಯವಾಗಿದೆ. ಈ ಹಿನ್ನಲೆಯಲ್ಲಿ ಈ ಕ್ಷೆತ್ರದಲ್ಲಿ ಕಾಂಗ್ರೆಸ್ ಹಾಗು ಬಿಜೆಪಿಗೆ ಈ ಚುನಾವಣೆ ಹೈಓಲ್ಟೇಜ್ ಕದನ . ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ ರಮಾನಾಥ್ ರೈ ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದರೆ, ಬಿಜೆಪಿ ಯ ಅಭ್ಯರ್ಥಿ ರಾಜೇಶ್ ನಾಯ್ಕ್ ಈ ಬಾರಿ ನೇರ ಬೌಂಡರಿ ಬಾರಿಸುವ ತವಕದಲ್ಲಿದ್ದಾರೆ.

    ಆಭ್ಯರ್ಥಿಗಳ ಪೈಕಿ ಕಾಂಗ್ರೆಸ್ ನ ರಮಾನಾಥ್ ರೈ ಇದು 8ನೇ ಚುನಾವಣೆ . ಬಿಜೆಪಿ ಯ ರಾಜೇಶ್ ನಾಯ್ಕ್ 2 ನೇ ಬಾರಿ ಅದೃಷ್ಟ ಪರೀಕ್ಷಿಸುತ್ತಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ನೇರ ಹಣಾಹಣಿ ಇರುವುದರಿಂದ ಎರಡೂ ಪಕ್ಷಗಳು ಅಭಿವೃದ್ದಿ , ಕೋಮುವಾದ ಮತ್ತು ತುಷ್ಟೀಕರಣ ವಿಚಾರವನ್ನು ಮುಂದಿಟ್ಟು ಪ್ರಚಾರ ಮಾಡುತ್ತಿವೆ.

    ಈ ಗಾಗಲೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗು ಮುಖ್ಯಮಂತ್ರಿ ಸಿದ್ದರಾಮಯ್ಯ ಬಂಟ್ವಾಳಕ್ಕೆ ಬೇಟಿ ನೀಡಿ ಅಬ್ಬರದ ಪ್ರಚಾರ ನಡೆಸಿ ತೆರಳಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ ಅಮಿತ್ ಶಾ ಚುನಾವಣೆ ಘೋಷಣೆಗೂ ಮುನ್ನವೇ ಬಂಟ್ವಾಳದಲ್ಲಿ ಕಾರ್ಯಕರ್ತರೊಂದಿಗೆ ಮಾತನಾಡಿ ಚುನಾವಣಾ ರಣತಂತ್ರ ರೂಪಿಸಿ ತೆರಳಿದ್ದಾರೆ.

    ಈ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಜಾತಿವಾರು ಲೆಕ್ಕಾಚಾರವನ್ನು ಗಮನಿಸುವುದಾದರೆ ಇಲ್ಲಿ 2,16,027ಮತದಾರರಿದ್ದಾರೆ . ಈ ಪೈಕಿ ಒಕ್ಕಲಿಗ ಗೌಡ ಸಮುದಾಯದವರು 10022 ರಷ್ಟಿದ್ದಾರೆ. ಬಿಲ್ಲವರು 57,737 , ಮುಸ್ಲಿಮರು 44,600 , ಕ್ರಿಶ್ಚಿಯನ್ನರು 13,025 ರಷ್ಟಿದ್ದರೆ , ಪರಿಶಿಷ್ಟ ಜಾತಿ ಸಮುದಾಯದವರು 12,067ರಷ್ಟಿದ್ದಾರೆ . ಪರಿಶಿಷ್ಟ ಪಂಗಡದವರ ಸಂಖ್ಯೆ ಸುಳ್ಯದಲ್ಲಿ 13,562 ದಷ್ಟಿದೆ. ಇಲ್ಲಿ ಬ್ರಾಹ್ಮಣ ಮತದಾದರು 7000 ಸಾವಿರ ದಷ್ಟಿದ್ದಾರೆ. ಈ ಕ್ಷೇತ್ರದಲ್ಲಿ ಬಂಟ್ಸ್ 15000 ದಷ್ಟಿದ್ದರೆ, ಕುಲಾಲರು 18,357 ರಷ್ಟಿದ್ದು ಫಲಿತಾಂಶ ಬದಲಿಸುವ ಶಕ್ತಿ ಹೊಂದಿದ್ದಾರೆ.

    ಅದಲ್ಲದೆ ಈ ಕ್ಷೇತ್ರದಲ್ಲಿ ವಿಶ್ವಕರ್ಮ ,ಜೈನ್ , ಕ್ಷತ್ರೀಯ ,ಸವಿತಾ ಸಮಾಜ ,ಮಡಿವಾಳ , ಗೌಡ ಸರಸ್ವತ ಬ್ರಾಹ್ಮಣ ಸಮುದಾಯದವರು ಗಣನೀಯ ಸಂಖ್ಯೆಯಲ್ಲಿದ್ದಾರೆ . ಈ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಬಿಲ್ಲವ ಸಮುದಾಯದವ ಮತಗಳೆ ನಿರ್ಣಾಯಕ ಎಂದು ಹೇಳಲಾಗುತ್ತದೆ .

    Share Information
    Advertisement
    Click to comment

    Leave a Reply

    Your email address will not be published. Required fields are marked *