DAKSHINA KANNADA
ಕೇಂದ್ರ ಮಂಡಿಸಿರುವ ಬಜೆಟ್ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನಾಯಕರು ಏನಂತಾರೆ..!?

ಮಂಗಳೂರು : ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್-2024 ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ನಾಯಕರು ಪ್ರತಿಕ್ರೀಯಿಸಿದ್ದು ಇದೊಂದು ನಿರಾಶದಾಯಕ ಬಜೆಟ್ ಎಂದಿದ್ದಾರೆ.
ಕೇಂದ್ರ ಬಜೆಟ್ ನಿರಾಶಾದಾಯಕ : ಮಾಜಿ ಸಚಿವ B ರಮನಾಥ ರೈ

ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್-2024 ನಿರಾಶಾದಾಯಕವಾಗಿದೆ. ವಿತ್ತ ಸಚಿವರು ಕೇವಲ ಭರವಸೆ ಕೊಡುವ ಚುನಾವಣಾ ಭಾಷಣ ಮಾಡಿದರೋ ಅಥವಾ ಆಯವ್ಯಯ ಪತ್ರ ಮಂಡಿಸಿದರೋ ಎಂಬ ಸಂಶಯ ಬರುತ್ತಿದೆ. ಪ್ರಗತಿ, ಬೆಳವಣಿಗೆ, ಧ್ಯೇಯ, ಆಧ್ಯತೆ, ಗಮನ, ಸಹಾಯ, ಬೆಂಬಲ, ಸಹಕಾರ, ಕ್ರಮ, ಕಾರ್ಯಕ್ರಮ, ಮಂತ್ರ ಎಂಬ ಪದಗಳನ್ನು ಹೇಳಿದ್ದರೆ ಹೊರತು ನಿರ್ದಿಷ್ಟವಾಗಿ ಅನುದಾನ ಹಂಚಿಕೆ ಮಾಡಿಲ್ಲ. ಈ ಬಜೆಟ್ ಪ್ರಾದೇಶಿಕತೆಯನ್ನು ಮರೆತಿದೆ. ವಲಯಗಳನ್ನು ಕಡೆಗಣಿಸಿದೆ. ವರ್ಗಗಳನ್ನು ನಿರ್ಲಕ್ಷ್ಯ ಮಾಡಿದೆ. ಯುವಕರು, ಅನ್ನದಾತರು, ಬಡವರು, ಮಹಿಳೆಯರಿಗೆ ಆದ್ಯತೆ ನೀಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಈ ವರ್ಗಕ್ಕೆ ವಿಶೇಷವಾದ ಘೋಷಣೆ ಮಾಡಿಲ್ಲ. ಅಲ್ಲದೇ ಮೋದಿ ಸರ್ಕಾರದ ಬಜೆಟ್‌ನಲ್ಲಿ ಸಮಗ್ರ ಕರ್ನಾಟಕ ಮತ್ತು ಕರಾವಳಿ ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಬಜೆಟ್‌ನಲ್ಲಿ ವಿಶೇಷ ಅನಿಸುವಂಥದ್ದು ಏನೂ ಇಲ್ಲ. ಇದು ಮೋದಿ ಸರ್ಕಾರದ ಅಂತಿಮ ಬಜೆಟ್ ಆಗಲಿದೆ.
ಪ್ರಗತಿ ಹಿನ್ನಡೆಯ ಸಂಕೇತ: ಕೆ ಹರೀಶ್ ಕುಮಾರ್
ದೇಶದ ಬಿಜೆಪಿ ಸರಕಾರ ಹೇಳುತ್ತಿರುವ ದೇಶದ ಅಭಿವೃದ್ಧಿ ಶಕೆ ಕನ್ನಡಿಯೊಳಗಿನ ಗಂಟು ಇದ್ದಂತೆ. ದೇಶದ ಪ್ರಗತಿ ಹಿನ್ನಡೆ ಕಂಡಿರುವ ಈ ಕಾಲಘಟ್ಟದಲ್ಲಿ ನಿರ್ಮಲಾ ಸೀತಾರಾಮನ್ ಅವರು ಈ ರೀತಿಯ ಬಜೆಟ್ ಅಲ್ಲದೆ ಬೇರೇನು ಮಂಡಿಸಲು ಸಾಧ್ಯವಿಲ್ಲö ಎಂದು ವಿಧಾನ ಪರಿಷತ್ ಶಾಸಕರುಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗೆಸ್ ಅಧ್ಯಕ್ಷ ಕೆ ಹರೀಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಕಾರ್ಪೊರೇಟ್ ಸಂಸ್ಥೆಗಳ ಅಡಿಯಾಳಾಗಿರುವ ಕೇಂದ್ರ ಸರಕಾರ ಈ ಬಜೆಟ್‌ನಲ್ಲಿ ಬಡವರು, ಮಧ್ಯಮ ವರ್ಗಕ್ಕೆ ಯಾವುದೇ ಯೋಜನೆ ಘೋಷಿಸಿಲ್ಲö. ಈ ದೇಶದಲ್ಲಿ ಅತೀ ದೊಡ್ಡ ಸಂಖ್ಯೆಯಲ್ಲಿರುವ ಆದಾಯ ತೆರಿಗೆದಾರರಿಗೆ ಹೇಳುವಂತಹ ಯಾವುದೇ ಘೋಷಣೆಯಿಲ್ಲö. ನಿಜಕ್ಕೂ ನಿರಾಶದಾಯಕ ಬಜೆಟ್ ಇದಾಗಿದ್ದುö, ಮುಂದೆ ಆಡಳಿತಕ್ಕೆ ಬರುವ ವಿಶ್ವಾಸ ಬಿಜೆಪಿಯವರಿಗಿಲ್ಲö ಎಂದು ಕೆ ಹರೀಶ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೇಶವಾಸಿಗಳಿಗೆ ನಿರಾಶೆಯ ಬಜೆಟ್,ಮಂಜುನಾಥ ಭಂಡಾರಿ, ಶಾಸಕರು ವಿಧಾನ ಪರಿಷತ್
ಕೇಂದ್ರ ಸರಕಾರದ ಮಧ್ಯಂತರ ಬಜೆಟ್‌ನಲ್ಲಿ ಬಡವರು, ಮಧ್ಯಮ ವರ್ಗವನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಆದಾಯ ತೆರಿಗೆದಾರರ ನಿರೀಕ್ಷೆ ಹುಸಿಯಾಗಿದೆ. ವಿತ್ತ ಸಚಿವರು 55 ನಿಮಿಷಗಳ ಕಾಲ ಚುನಾವಣಾ ಭಾಷಣ ಮಾಡಿದರೇ ಹೊರತು ದೇಶದ ಅಭಿವೃದ್ಧಿ ದೃಷ್ಟಿಕೋನದಿಂದ ಯಾವುದೇ ಯೋಜನೆ ಪ್ರಕಟಿಸಿಲ್ಲ. ದೇಶದ ಆದಾಯ ಮೂಲವಾದ ಕೃಷಿ, ಉದ್ಯಮ, ಸೇವಾ ಕ್ಷೇತ್ರವನ್ನು ಕಡೆಗಣಿಸಲಾಗಿದೆ. ಬಹುನಿರೀಕ್ಷೆಯಿಂದ ಬಜೆಟ್‌ನ್ನು ಕಾಯುತ್ತಿದ್ದ ದೇಶವಾಸಿಗಳಿಗೆ ಕೇಂದ್ರ ಸರಕಾರ ನಿರಾಶೆ ಮೂಡಿಸಿದೆ.