Connect with us

LATEST NEWS

ರಸ್ತೆ ಗುಂಡಿಗಳ ಮಧ್ಯೆ ವೆಡ್ಡಿಂಗ್ ಪೋಟೋಶೂಟ್….!!

ಕೇರಳ ಸೆಪ್ಟೆಂಬರ್ 21:ಕೇರಳದಲ್ಲಿ ಮದುವೆ ಪೋಟೋಶೂಟ್ ಗಳಲ್ಲಿ ವಿಭಿನ್ನತೆಗಳು ಕಂಡು ಬರುತ್ತಿದ್ದು. ಈಗಾಗಲೇ ಹಲವಾರು ಪೋಟೋಶೂಟ್ ಗಳಲ್ಲಿ ವಿಭಿನ್ನತೆ ಕಂಡು ಬಂದಿದ್ದು, ಇದೀಗ ಕೇರಳದ ವಧುವೊಬ್ಬರು ತಮ್ಮ ಮದುವೆಯ ಫೋಟೊಶೂಟ್ ಅನ್ನು ಆ ಪ್ರದೇಶದಲ್ಲಿನ ರಸ್ತೆ ಗುಂಡಿಗಳ ಬಳಿ ಮಾಡಿಸಿಕೊಳ್ಳುವ ಮೂಲಕ ಸಮಸ್ಯೆಯ ಬಗ್ಗೆ ಆಡಳಿತ ವರ್ಗದ ಗಮನ ಸೆಳೆದಿದ್ದಾರೆ.


ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಂಪು ಸೀರೆಯುಟ್ಟ ವಧು ನೀರು ತುಂಬಿದ ರಸ್ತೆ ಗುಂಡಿಗಳ ಪಕ್ಕದಲ್ಲಿ ನಡೆಯುತ್ತಾ ಬರುತ್ತಿದ್ದಾರೆ. ಛಾಯಾಗ್ರಾಹಕರು ಗುಂಡಿಗಳನ್ನೂ ಹೈಲೆಟ್ ಮಾಡಿ ಫೋಟೊಗಳನ್ನು ಕ್ಲಿಕ್ಕಿಸಿದ್ದಾರೆ. ಅಕ್ಕಪಕ್ಕ ಹೋಗುತ್ತಿದ್ದ ವಾಹನ ಸವಾರರು ಸಹ ಪರದಾಡುತ್ತಾ ಸಂಚರಿಸುತ್ತಿರುವುದು ಕಂಡುಬಂದಿದೆ.

ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಈ ವಿಡಿಯೊ 43 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, 3.7 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ. ವಧುವಿನ ಸೃಜನಶೀಲತೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಕೇರಳದ ರಸ್ತೆ ಪರಿಸ್ಥಿತಿಗಳನ್ನು ಗೇಲಿ ಮಾಡಿದ್ದಾರೆ. ಒಬ್ಬ ಬಳಕೆದಾರ ‘ಈ ಫೋಟೊಶೂಟ್ ರಸ್ತೆಯಲ್ಲಿ ಅಲ್ಲ ಕೊಳದಲ್ಲಿ ನಡೆಯುತ್ತಿದೆ’ಎಂದು ಬರೆದಿದ್ದಾರೆ.

Advertisement
Click to comment

You must be logged in to post a comment Login

Leave a Reply