Connect with us

    LATEST NEWS

    ಬ್ರಹ್ಮಾವರ – ಮದುವೆ ಪೋಟೋ ತೆಗೆಸಿ ಬರುವಷ್ಟರಲ್ಲಿ 2.40 ಲಕ್ಷ ಮೌಲ್ಯದ ಸೊತ್ತಗಳಿದ್ದ ಬ್ಯಾಗ್ ಕದ್ದ ಕಳ್ಳ

    ಬ್ರಹ್ಮಾವರ ಫೆಬ್ರವರಿ 06: ಮದುಮಕ್ಕಳ ಜೊತೆ ಪೋಟೋ ತೆಗೆಸಿ ಬರುವದರಲ್ಲಿ ಕುರ್ಚಿಯ ಮೇಲಿಟ್ಟ ಲಕ್ಷಾಂತರ ಮೌಲ್ಯದ ಸೊತ್ತುಗಳಿದ್ದ ಬ್ಯಾಗ್ ನ್ನು ಕಳ್ಳನೊಬ್ಬ ಎಗರಿಸಿದ ಘಟನೆ ಬ್ರಹ್ಮಾವರದ ಶ್ಯಾಮಿಲಿ ಶನಾಯ ಹಾಲ್‌ನಲ್ಲಿ ನಡೆದಿದೆ.


    ನೀಲಾವರದ ಜಯಶ್ರೀ ಸುರೇಶ್ ಎಂಬವರ ಮಗಳು ಸಮೀಕ್ಷಾಳ ಮದುವೆ ಆರತಕ್ಷತೆ ಸಮಾರಂಭ ಬ್ರಹ್ಮಾವರ ಶ್ಯಾಮಿಲಿ ಶನಾಯ ಹಾಲ್‌ನಲ್ಲಿ ನಡೆದಿದ್ದು, ಈ ವೇಳೆ ಜಯಶ್ರೀ ತನ್ನ ಕೈಯಲ್ಲಿದ್ದ ಬ್ಯಾಗನ್ನು ಹಾಲ್ ಸ್ಟೇಜ್‌ನ ಕುರ್ಚಿಯ ಮೇಲೆ ಇಟ್ಟು ಮಗಳೊಂದಿಗೆ ಫೋಟೋ ತೆಗೆಸಿದ್ದರು. ಬಳಿಕ ಬಂದು ನೋಡಿದಾಗ ಬ್ಯಾಗ್ ಕಳವಾಗಿರುವುದು ಕಂಡುಬಂತು. ಬ್ಯಾಗ್‌ನಲ್ಲಿ 2,40,000 ರೂ. ಮೌಲ್ಯದ ನಗದು ಹಾಗೂ ವಸ್ತುಗಳಿದ್ದವು ಎಂದು ತಿಳಿದುಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply