FILM
ಕಾನ್ ಫೆಸ್ಟಿವಲ್ ರೆಡ್ ಕಾರ್ಪೆಟ್ ನಲ್ಲಿ ಹಣೆಗೆ ಸಿಂಧೂರ ಇಟ್ಟುಕೊಂಡು ಮಿಂಚಿದ ಐಶ್ವರ್ಯಾ ರೈ

ಮುಂಬೈ ಮೇ 22: ವಿಶ್ವದ ಪ್ರತಿಷ್ಠಿತ ಕಾನ್ ಅಂತರಾಷ್ಟ್ರೀಯ ಚಿತ್ರೋತ್ಸವದ ರೆಡ್ ಕಾರ್ಪೆಟ್ ನಲ್ಲಿ ಖ್ಯಾತ ಬಾಲಿವುಡ್ ನಟಿ ಕನ್ನಡತಿ ಐಶ್ವರ್ಯಾ ರೈ ತಮ್ಮ ಲುಕ್ ನಿಂದ ಇದೀಗ ಸುದ್ದಿಯಲ್ಲಿದ್ದಾರೆ. ಹಣೆಗೆ ಸಿಂಧೂರದ ಜೊತೆಗೆ ಸೀರೆಯನ್ನು ಉಟ್ಟಿರುವ ಅವರ ಪೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಫ್ರಾನ್ಸ್‌ನ ಕಾನ್ ನಗರದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಐಶ್ವರ್ಯಾ ಅವರು ಅತ್ಯಾಕರ್ಷಕ ಐವರಿ ಬಣ್ಣದ ಸೀರೆಯ ಜೊತೆ ಹಣೆಗೆ ಸಿಂಧೂರವನ್ನು ಧರಿಸಿದ್ದರು. ಅಷ್ಟೇ ಅಲ್ಲದೇ ಸಿಂಧೂರ ಎದ್ದು ಕಾಣುವ ಹಾಗೇ ಹೇರ್‌ಸ್ಟೈಲ್ ಕೂಡ ಮಾಡಿದ್ದರು.

ಇತ್ತೀಚೆಗೆ ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಕೊಂದ ಭಯೋತ್ಪಾದಕರ ಮೇಲೆ ಭಾರತ ಅಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿತ್ತು, ಇದೀಗ ಈ ಕಾರ್ಯಾಚರಣೆಗೆ ಬೆಂಬಲವಾಗಿ ನಟಿ ಐಶ್ವರ್ಯಾ ರೈ ಸಿಂಧೂರ ಧರಿಸಿ ಅಂತರಾಷ್ಟ್ರೀ ಕಾನ್ ಚಿತ್ರೋತ್ಸವದ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ್ದಾರೆ ಎನ್ನಲಾಗಿದೆ.ಸದ್ಯ ಐಶ್ವರ್ಯಾ ರೈ ಅವರ ಪೋಟೋಗಳು ಸಾಮಾಜಿಕ ಜಾಲತಾಣದವಲ್ಲಿ ವೈರಲ್ ಆಗಿದೆ.