LATEST NEWS
ಹಿಜಬ್ ಮೂಲಭೂತ ಹಕ್ಕು ಎಂದು ಘೋಷಿಸಲು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ ವಿಧ್ಯಾರ್ಥಿನಿ

ಬೆಂಗಳೂರು ಜನವರಿ 31: ಹಿಜಬ್ ನ್ನು ಸಂವಿಧಾನದ 14 ಮತ್ತು 25 ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ಮೂಲಭೂತ ಹಕ್ಕು ಎಂದು ಘೋಷಿಸುವಂತೆ ಕೋರಿ ಉಡುಪಿ ಸರಕಾರಿ ಕಾಲೇಜಿನ ವಿಧ್ಯಾರ್ಥಿನಿಯೊಬ್ಬಳು ರಾಜ್ಯ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದಾಳೆ.
ಉಡುಪಿ ಸರಕಾರಿ ಕಾಲೇಜಿನಲ್ಲಿ ನಡೆಯುತ್ತಿರು ಹಿಜಬ್ ವಿವಾದ ಇದೀಗ ಕೋರ್ಟ್ ಮೆಟ್ಟಿಲೇರಿದ್ದು, ಸಂವಿಧಾನದಡಿ ಧಾರ್ಮಿಕಹಕ್ಕುಗಳನ್ನು ನೀಡಲಾಗಿದ್ದು, ಹಿಜಾಬ್ ಧರಿಸುವುದು ಧಾರ್ಮಿಕ ಹಕ್ಕಿನ ಭಾಗ ವಾಗಿದ್ದು, ಆದರೆ ಉಡುಪಿಯಲ್ಲಿ ಸರಕಾರಿ ಕಾಲೇಜಿನಲ್ಲಿ ಹಿಜಬ್ ಧರಿಸಲು ಅವಕಾಶ ನೀಡದ ಕಾರಣ ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಅವರು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.

ಈ ನಡುವೆ ಉಡುಪಿ ಹಿಜಬ್ ಡ್ರಾಮಾಕ್ಕೆ ಕಾಲೇಜಿನ ಆಡಳಿತ ಮಂಡಳಿ ನಾಳೆಯವರೆಗೆ ಅವಕಾಶ ನೀಡಿದ್ದು, ಹಿಜಬ್ ಇಲ್ಲದೆ ತರಗತಿಗೆ ಬರಲು ವಿಧ್ಯಾರ್ಥಿನಿಯರಿಗೆ ಸೂಚಿಸಿದ್ದು, ಇಲ್ಲವಾದರೇ ಕಾಲೇಜಿನ ಆವರಣದ ಹತ್ತಿರವೂ ಬರಬೇಡಿ ಎಂದು ಖಡಕ್ ಸೂಚನೆ ನೀಡಿದೆ.