LATEST NEWS
ಎಂಫ್ರೆಂಡ್ಸ್ ವತಿಯಿಂದ ವೆನ್ಲಾಕ್ ಆಸ್ಪತ್ರೆಗೆ ಶುದ್ಧ ಕುಡಿಯುವ ನೀರಿನ ಘಟಕ
ಎಂಫ್ರೆಂಡ್ಸ್ ವತಿಯಿಂದ ವೆನ್ಲಾಕ್ ಆಸ್ಪತ್ರೆಗೆ ಶುದ್ಧ ಕುಡಿಯುವ ನೀರಿನ ಘಟಕ
ಮಂಗಳೂರು ಡಿಸೆಂಬರ್ 09: ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಂಗಳೂರಿನ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಸತ್ವಾ ಬಾಯ್ಸ್ ದುಬಾಯಿ ಪ್ರಾಯೋಜಕತ್ವದಲ್ಲಿ ಸುಮಾರು 50 ಸಾವಿರ ರೂ. ವೆಚ್ಚದಲ್ಲಿ ಅಳವಡಿಸಿದ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ ನಡೆಯಿತು.
ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿ ಎಚ್.ಆರ್. ಅವರು ನೂತನ ಘಟಕ ಉದ್ಘಾಟಿಸಿ, ಅತ್ಯಂತ ಬಡವರು ಚಿಕಿತ್ಸೆಗೆ ಬರುವ ವೆನ್ಲಾಕ್ ಸರಕಾರಿ ಆಸ್ಪತ್ರೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ಅತೀ ದೊಡ್ಡ ಮಾನವೀಯ ಕೆಲಸವನ್ನು ಎಂಫ್ರೆಂಡ್ಸ್ ಮಾಡಿದೆ. ಇದಕ್ಕೆ ಪ್ರಾಯೋಜಕತ್ವ ನೀಡಿದವರನ್ನು ಸರಕಾರದ ಪರವಾಗಿ ಅಭಿನಂದಿಸುತ್ತಿದ್ದೇನೆ. ಎಂಫ್ರೆಂಡ್ಸ್‍ನಿಂದ ಈಗಾಗಲೇ ಒಳರೋಗಿಗಳ ವಿಭಾಗದಲ್ಲಿ ನೀರಿನ ಘಟಕ ಮತ್ತು ಪ್ರತಿದಿನ ರಾತ್ರಿ ರೋಗಿಗಳ ಜತೆಗಾರರಿಗೆ ಊಟ ನೀಡುತ್ತಿರುವುದು ಶ್ಲಾಘನೀಯ ಎಂದರು.
ಎಂಫ್ರೆಂಡ್ಸ್ ಟ್ರಸ್ಟಿಗಳಾದ ಅಹ್ಮದ್ ಇರ್ಶಾದ್ ತುಂಬೆ, ಸುಜಾ ಮೊಹಮ್ಮದ್, ವೆನ್ಲಾಕ್ ವೈದ್ಯ ಡಾ.ಬಾತಿಶ್, ಸತ್ವಾ ಬಾಯ್ಸ್ ವೆಲ್ಫೇರ್ ವಾಟ್ಸ್ಯಾಪ್ ರೂಪಿನ ಅಡ್ಮಿನ್‍ಗಳಾದ ಅಬ್ದುಲ್ ಸಮದ್, ಮೊಹಮ್ಮದ್ ಶಮೀಮ್, ಸುಹೈಬ್ ಮೊಹಮ್ಮದ್, ಸದಸ್ಯರಾದ ನಿಝಾಮ್ ಮೊಹಮ್ಮದ್, ಮೊಹಮ್ಮದ್ ಹಾರೀಸ್, ಅಬ್ದುಲ್ ಗಫ್ಫಾರ್ ಮತ್ತಿತರರು ಉಪಸ್ಥಿತರಿದ್ದರು.