Connect with us

    LATEST NEWS

    ಆಡಿ ಕಾರ್ ನಲ್ಲಿ ಬಂದು ಸೊಪ್ಪು ಮಾರುವ ಪ್ರಗತಿ ಪರ ಕೃಷಿಕ – ವಿಡಿಯೋ ವೈರಲ್

    ಕೇರಳ ಅಕ್ಟೋಬರ್ 1: 44 ಲಕ್ಷ ಬೆಲೆ ಬಾಳುವ ಕಾರಿನಲ್ಲಿ ಬಂದು ರೈತನೊಬ್ಬ ರಸ್ತೆ ಬದಿಯಲ್ಲಿ ತರಕಾರಿ ಮಾರಾಟ ಮಾಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೇರಳದ ಸುಜಿತ್ ಎಸ್‌ಪಿ ಎನ್ನುವವರು ಪ್ರತಿನಿತ್ಯ ತಮ್ಮ ಆಡಿ ಎ4 ಕಾರಿನಲ್ಲಿ ಬಂದು ತಾವು ಬೆಳೆಯುವ ವಿವಿಧ ತರಕಾರಿಗಳನ್ನು ಸನಿಹದ ಮಾರುಕಟ್ಟೆಯಲ್ಲಿ ತಾವೇ ಮಾರಾಟ ಮಾಡಿ ಕಾರಿನಲ್ಲಿ ವಾಪಸ್ ಆಗುತ್ತಾರೆ.

    ಕೇರಳದ ಸುಜಿತ್ ಎಸ್‌ಪಿ ವೆರೆಟಿ ಫಾರ್ಮರ್ (Variety Farmer) ಎಂಬ ಯುಟ್ಯೂಬ್ ಚಾನೆಲ್ ಹೊಂದಿದ್ದು, ಅಲ್ಲದೆ ಇನ್ಸ್ಟಾ ಗ್ರಾಂ ಮತ್ತು ಫೆಸ್ ಬುಕ್ ಖಾತೆಗಳಲ್ಲಿ ಬಹಳಷ್ಟು ಪ್ರಸಿದ್ದಿ ಹೊಂದಿದ್ದಾರೆ.


    ಸುಜಿತ್ ಎಸ್‌ಪಿ ಮೊದಲು ಕ್ಯಾಬ್ ಚಾಲಕರಾಗಿದ್ದರು. ಬಳಿಕ ಆಧುನಿಕ ಕೃಷಿಗೆ ಮಾರುಹೋಗಿ ಸದ್ಯ ಅವರು ಇದೀಗ ಸ್ಥಳೀಯವಾಗಿ ಉತ್ತಮ ಪ್ರಗತಿಪರ ರೈತ ಎನಿಸಿಕೊಂಡಿದ್ದಾರೆ. ಸುಜಿತ್ ಅವರ ಈ ವಿಡಿಯೊವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. 7 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿದೆ. ಔಡಿ ಎ4 ಕಾರಿನ ಸದ್ಯದ ಮಾರುಕಟ್ಟೆ ಬೆಲೆ ₹ 44 ಲಕ್ಷ ಇದೆ.

    Share Information
    Advertisement
    Click to comment

    You must be logged in to post a comment Login

    Leave a Reply