Connect with us

    LATEST NEWS

    ಕೋತಿ ಮರಿ ಕೊಂದಿದ್ದಕ್ಕೆ ಪ್ರತಿಕಾರ: 80ಕ್ಕೂ ಅಧಿಕ ನಾಯಿ ಮರಿಗಳನ್ನು ಕೊಂದ ಕೋತಿಗಳು

    ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲೀಗ ಕೋತಿಗಳು ಹಾಗೂ ನಾಯಿಗಳ ನಡುವೆ ರಕ್ತಸಿಕ್ತ ಯುದ್ದ ನಡೆಯುತ್ತಿದ್ದು, ನಾಯಿಗಳು ಕೋತಿ ಮರಿಯೊಂದನ್ನು ಕೊಂದ ಪ್ರತೀಕಾರಕ್ಕೆ ಇದೀಗ ಕೋತಿಗಳು 80ಕ್ಕೂ ಅಧಿಕ ನಾಯಿಮರಿಗಳನ್ನು ಸಾಯಿಸಿವೆ.


    ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಜಲ್‌ಗಾಂವ್‌ನಲ್ಲಿ ಈ ಘಟನೆ ನಡೆದಿದ್ದು, ಈ ಪ್ರದೇಶದಲ್ಲಿ ಬೀದಿನಾಯಿಗಳು ಕೋತಿ ಮರಿಯನ್ನು ಕೊಂದು ಹಾಕಿದ ಬಳಿಕ ಈ ಸೇಡಿನ ಕೊಲೆಯ ಸರಣಿ ಆರಂಭವಾಗಿದೆ.


    ಕೋತಿ ಮರಿ ಸಾವಿಗೆ ಸೇಡು ತೀರಿಸಿಕೊಳ್ಳಲು ಮುಂದಾಗಿರುವ ಕೋತಿಗಳು ಪ್ರದೇಶದಲ್ಲಿರುವ ನಾಯಿ ಮರಿಗಳನ್ನು ಎತ್ತಿಕೊಂಡು ಬಂದು ಮರ ಅಥವಾ ಎತ್ತರದ ಕಟ್ಟಡದ ಮೇಲಿಂದ ಎಸೆಯುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಮಜಲ್‌ಗಾಂವ್‌ನಲ್ಲಿರುವ ಲವೂಲ್ ಗ್ರಾಮದಲ್ಲಿ ಸುಮಾರು 5,000 ನಿವಾಸಿಗಳಿದ್ದಾರೆ. ಆದರೆ ಈ ಗ್ರಾಮದಲ್ಲೀಗ ಒಂದೇ ಒಂದು ನಾಯಿ ಮರಿಯೂ ಉಳಿದಿಲ್ಲ ಎಂದು ಹೇಳಲಾಗಿದೆ.

    ಸ್ಥಳಕ್ಕೆ ಭೇಟಿ ಕೊಟ್ಟಿರುವ ನಾಗ್ಪುರ ಅರಣ್ಯ ಇಲಾಖೆಯ ಅಧಿಕಾರಿಗಳು ನಾಯಿಮರಿಗಳನ್ನು ಕೊಂದಿರುವ ಎರಡು ಕೋತಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಈ ಎರಡು ಕೋತಿಗಳನ್ನು ನಾಗ್ಪುರಕ್ಕೆ ರವಾನಿಸಲಾಗಿದ್ದು, ಅಲ್ಲಿನ ಸಮೀಪದ ಅರಣ್ಯದಲ್ಲಿ ಬಿಡುವುದಾಗಿ ತಿಳಿಸಲಾಗಿದೆ.


    ಅಲ್ಲಿದ್ದವರು ಈ ನಾಯಿಗಳನ್ನು ರಕ್ಷಿಸಲು ಮುಂದಾದಾಗ ಮಂಗಗಳು ಮನುಷ್ಯರ ಮೇಲೂ ದಾಳಿ ಮಾಡತೊಡಗಿವೆ. ಮನುಷ್ಯರ ಮಕ್ಕಳು ಮಂಗಗಳ ದಾಳಿಗೆ ಬಲಿಯಾಗುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply