DAKSHINA KANNADA
ಪುತ್ತೂರು – ಹೂ ಮಾರಾಟ ಮಾಡುತ್ತಿದ್ದ ಮಹಿಳೆಯ ಮೇಲೆ ಬಿದ್ದ ಗೊಡೆ

ಪುತ್ತೂರು ಮೇ 25: ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಮಳೆ ಅಬ್ಬರಕ್ಕೆ ಹಲವೆಡೆ ಹಾನಿಗಳಾಗಿವೆ. ಹಳೆಯ ಕಟ್ಟಡದ ಗೋಡೆ ಕುಸಿದು ಬಿದ್ದ ಪರಿಣಾಮ ಸಮೀಪದಲ್ಲಿ ಹೂ ಮಾರಾಟ ಮಾಡುತ್ತಿದ್ದ ಮಹಿಳೆ ಸಣ್ಣಪುಟ್ಟ ಗಾಯಗಳಿಂದ ಪಾರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾವದ ದ್ವಾರದ ಬಳಿ ಇದ್ದ ಹಳೆಯ ಕಟ್ಟಡವನ್ನು ಇತ್ತೀಚೆಗೆ ನೆಲಸಮಗೊಳಿಸಲಾಗಿತ್ತು, ಆದರೆ ಈ ವೇಳೆ ಅದರ ಒಂದು ಪಾರ್ಶ್ವದ ಗೊಡೆಯನ್ನು ಹಾಗೆಯೆ ಬೀಡಲಾಗಿತ್ತು, ಅಲ್ಲೇ ಸಮೀಪದಲ್ಲಿ ಮಹಿಳೆಯೊಬ್ಬರು ಹೂ ಮಾರಾಟ ಮಾಡುತ್ತಿದ್ದು, ಇಂದು ಸುರಿದ ಭಾರೀ ಮಳೆಗೆ ಗೊಡೆ ಕುಸಿದು ಬಿದ್ದಿದೆ. ಮಹಿಳೆ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
